ಗೊತ್ತು ಗುರಿಯಿಲ್ಲದ ಸಾಗಿದ ಬದುಕಿಗೆ ಒಂದರ್ಥ ಹುಟ್ಟಿದ ದಿನ ಇಂದೂ. ರಾಮಕ್ರಷ್ಣ ಮಠದ ಪೂಜ್ಯರಾದ ಶ್ರೀ ಗೌತಮಾನಂದ ಜೀ ಮಹಾರಾಜರಿಂದ ದೀಕ್ಷೆಯನ್ನು ಪಡೆದು ಇಂದಿಗೆ ಸರಿಯಾಗಿ ಒಂದು ವರ್ಷ. ಪ್ರತಿ ಜೀವಿಯ ಹುಟ್ಟು-ಸಾವುಗಳಲ್ಲಿಯೂ ಒಂದರ್ಥ ಇರುತ್ತೆ . ತನ್ನ ತಪೋಶಕ್ತಿಯಿಂದ ,ಶಿಕ್ಷಣದಿಂದ ಬದುಕಿನ ಈ ಕಗ್ಗಂಟಿನಿಂದ ಪಾರು ಮಾಡಿಸಿ ಒಂದು ಅಂತ್ಯವನ್ನ ಹಾಡುವ ಹಾದಿಗೆ ತಲುಪಿಸುವವನೆ ಗುರು. ಈ ಗುರುವಿನ ಪಾದಡದಿಯಲ್ಲಿ ಕೂತು ಆತ ಕೊಟ್ಟಿದ್ದನ್ನೆಲ್ಲ ಅರಗಿಸಿಕೊಳ್ಳುತ್ತ ಹೋದಾಗಲೆ ಈ ಜನ್ಮದ ಬದುಕಿಗೊಂದು ಅರ್ಥ .ಈ ಬದುಕಿಗೆ ಇಂತಹ ಗುರುವಿನ ಅಭಯ ಹಸ್ತ , ಆಸರೆ ಸಿಕ್ಕು ಇಂದಿಗೆ ಸರಿಯಾಗಿ ಒಂದು ವರ್ಷ. ಅದ್ಯಾಗೋ ಕಲ್ಕತ್ತೆಯ ಬೆಲೂರು ಮಠದಲ್ಲಿ ಈ ಮಂತ್ರದೀಕ್ಷೆ ನಡೆಯಬೇಕಿತ್ತು. ಅದ್ಯಾವ ಕಾರಣಕ್ಕೆ ಅಲ್ಲಿ ತಪ್ಪಿತೋ ಇಂದಿಗೂ ಗೊತ್ತಿಲ್ಲ. ಸಿಗುವ ಗುರು , ದೀಕ್ಷೆಯ ಸ್ಥಳ , ಸಮಯ ಎಲ್ಲವು ಆ ಭಗವಂತನ ಪೂರ್ವ ನಿರ್ಧರಿತ ಎಂಬಂತೆಯೇ ಗೋವೆಯೇ ರಾಮಕ್ರಷ್ಣ ಮಠದಲ್ಲಿ ನನ್ನ ಮಂತ್ರ ದೀಕ್ಷೆ ನಡೆಯಿತು. ಗೋವೆಯಲ್ಲಿ ರಾಮಕ್ರಷ್ಣ ಮಠ ಆರಂಭವಾಗಿದ್ದು ತೀರ ಇತ್ತೀಚಿನ ಎರಡೂವರೆ ವರ್ಷದ ಈಚೆಗೆ. ಅದಕ್ಕಿಂತ ಮೊದ್ಲು ರಾಮಕೃಷ್ಣ ಆಶ್ರಮವನ್ನ ಹುಡಕಾಡುತ್ತ ಗೋವೆಯ ಪೂರ್ತಿ ಸುತ್ತಿದ್ದು ಇನ್ನೂ ನೆನಪಿದೆ. ಆದ್ರೆ ನೋಡನೋಡತ್ತಲೇ ಮೊನ್ನೆ ರಾಮಕ್ರಷ್ಣ ಮಠದ ಹೊಸ ಕಟ್ಟಡದ ಉದ್ಘಾಟನೆಯು ಆಯಿತು. ಅದ್ಯಾವ ಪರಿ ವೇಗದಲ್ಲಿ ಇವೆಲ್ಲ ನಡೆಯಿತು ಎಂದರೆ ಇಂದಿಗೂ ನಂಬಲು ಅಸಾಧ್ಯ ನನಗೆ. ಅಂತೂ ಅಂತರಂಗದ ಈ ಯುದ್ಧ ತುಸು ಹಿಂದೆಯೇ ನಡೆದಿತ್ತಾದರೂ ಅದಕ್ಕೆ ಬಲ ಬಂದಿದ್ದು ಗುರುವಿನ ಆಗಮನದ ನಂತರವೇ. once again ಈ ದಾರಿಯ ಉದ್ದಕ್ಕೂ ಕೈ ಹಿಡಿದು ನಡೆಸಿದ್ದು ಚಕ್ರವರ್ತಿ ಅಣ್ಣನೆ. ಆ ದಿನ ಇನ್ನೂ ನೆನಪಿದೆ ಗೋವೆಯಲ್ಲಿ ರಾಮಕ್ರಷ್ಣ ಮಠದ ಆರಂಭವಾಗುತ್ತಿದೆ ಆದಷ್ಟು ಬೇಗ ಎಲ್ಲ ಕಾರ್ಯಗಳು ಶುರುವಾಗತ್ತೆ ಎಂಬ ಸುದ್ದಿಯನ್ನ ಕರೆಯ ಮೂಲಕ ತಿಳಿಸಿದ ಚಕ್ರವರ್ತಿ ಅಣ್ಣಾ, ಆ ದಿನದ ಆದ ಸಂತಸಕ್ಕೆ ಮಿತಿಯೇ ಇರಲಿಲ್ಲ . ಅಂತೂ ಗುರುವಿನ ಪದತಲಗಲ್ಲಿ ನಡೆಯುವ ಈ ಬದುಕು ಜೀವ ಗುರುವಿಗೆ ಸಮರ್ಪಣೆ.
Total Pageviews
Sunday, May 27, 2018
ಅಂತೂ ಗುರುವಿನ ಪದತಲಗಲ್ಲಿ ನಡೆಯುವ ಈ ಬದುಕು ಜೀವ ಗುರುವಿಗೆ ಸಮರ್ಪಣೆ.
Subscribe to:
Post Comments (Atom)
No comments:
Post a Comment