Total Pageviews
Saturday, November 22, 2014
ರಾಕ್ ಡೇ!! #RockDay!
ದೇಶ ಧರ್ಮವನ್ನು ಪ್ರಿತಿಸುವ ನಾವು ವಿವೇಕಾನಂದರನ್ನು ಚೆನ್ನಾಗಿ ತಿಳಿದುಕೊಂಡಿದ್ದೇವೆ. ಅವರ ಚಿಂತನೆಗಳನ್ನ ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಬದುಕುತ್ತಿದ್ದೇವೆ , ಹಾಗೆಯೇ ಜೀವನದಲ್ಲಿ ಒಮ್ಮೆಯಾದರು ಕನ್ಯಾಕುಮಾರಿಗೆ ಹೊಗಿಬರಬೇಕೆಂಬ ನಿಶ್ಚಯವನ್ನು ಮಾಡಿರುತ್ತೇವೆ. ಏಕೆಂದರೆ ಅಲ್ಲಿ ದೇವಿ ಕನ್ಯಾಕುಮಾರಿಯ ಮಂದಿರ ಇದೆ. ಅದರೊಂದಿಗೆ ಮತ್ತೊಂದು ಪ್ರಮುಖ ಆಕರ್ಷಣೆಯೆಂದರೆ ಸ್ವಾಮಿ ವಿವೇಕಾನಂದ ಬಂಡೆ. ನಮಗೆಲ್ಲ ಗೊತ್ತಿರುವ ಹಾಗೆ ವಿವೇಕಾನಂದರು ಭಾರತ ದರ್ಶನ ಮಾಡಿ ಕೊನೆಗೆ ೧೮೯೨- ಡಿಸೆಂಬರ್ ನಲ್ಲಿ ಕನ್ಯಕುಮಾರಿಯನ್ನು ತಲುಪಿದರು . ಸಂಪೂರ್ಣ ಭಾರತವನ್ನು ಸಂಚರಿಸಿದ ಅವರು ಭಾರತ ಎಂದರೆ ಕೇವಲ ಕಲ್ಕತ್ತೆಯಲ್ಲ ಎಂಬುವದನ್ನು ಅರಿತರು . ಬಡವರ ಹಸಿವನ್ನು ಕಂಡರು , ದೊಡ್ಡ ಜನ ಚಿಕ್ಕವರನ್ನು ತುಳಿಯುವದನ್ನು ಕಂಡರು, ಪೂರ್ತಿ ಭಾರತ ದೇಶ ಅಂಧಕಾರ ಅಜ್ಞಾನದಲ್ಲಿ ಮುಳುಗಿರುವದನ್ನು ಕಂಡರು. ಬ್ರಿಟೀಷರ ಗುಲಾಮಗಿರಿಗೆ ಸಿಕ್ಕಿ ಆತ್ಮಾಭಿಮಾನವನ್ನು ಮರೆತಿರುವುದನ್ನು ಕಂಡರು. ಇದನ್ನೆಲ್ಲಾ ಕಣ್ಣಾರೆ ಕಂಡ ಅವರು ಏನಾದರು ಪರಿಹಾರ ಹುಡುಕಬೇಕೆಂದು ಕನ್ಯಾಕುಮಾರಿಗೆ ಬಂದರು! ಈಗ ಇದಕ್ಕೆ ನಾನೇನು ಮಾಡಲು ಸಾಧ್ಯ, ನಾನೇನಾದರು ಮಾಡಬೇಕಲ್ಲವೇ , ನನ್ನಿಂದ ಏನು ಆಗದೇ ಎಂದು ಬಗೆಬಗೆಯಾಗಿ ಯೋಚಿಸಿ ಅದೇ ದುಖದಲ್ಲಿ ಸಮುದ್ರದ ದೊರದಲ್ಲಿ (೫೦೦ ಮೀ) ಕಾಣುವ ಒಂದು ದೊಡ್ಡ ಬಂಡೆಯನ್ನು ಕಂಡು ಆಕರ್ಷಿತರಾದರು. ಸಮುದ್ರದ ಅಲೆಗಳನ್ನು ಲೆಕ್ಕಿಸದೆ ಈಜಿಕೊಂಡು ಆ ಬಂಡೆಯನ್ನು ತಲುಪಿದರು . ಡಿಸೆಂಬರ್ ೨೫ ,೨೬,೨೭ ಮೂರು ದಿನಗಳ ಕಾಲ ಹಗಲು ರಾತ್ರಿ ಆ ಬಂಡೆಯ ಮೇಲೆ ಕೂತು ''ತಾಯಿ ಭಾರತ ಮಾತೆಯನ್ನು'' ಧ್ಯಾನಿಸಿದರು. ಆ ಧ್ಯಾನದಲ್ಲಿ ಅವರಿಗೆ ಪೂರ್ಣ ಭಾರತ ಅವರ ಕಣ್ಣೆದುರಿಗೆ ಹಾದುಹೋಯಿತು. ಕೊನೆಗೆ ಭಾರತದ ಸಮಸ್ಯೆಗೆ ಉತ್ತರವನ್ನು ಪಡೆದರು. ಅಲ್ಲಿ ಅವರಿಗೆ ಗುರುದೇವ ರಾಮಕೃಷ್ಣರು ಪಶ್ಚಿಮದಿಂದ -ಪೂರ್ವದೆಡೆಗೆ ನಡೆದು ಹೋದಂತೆ ಕಂಡಿತು. ನನ್ನ ಕೆಲಸ ಪಾಶ್ಚಾತ್ಯದೆಡೆಯೂ ಇದೆ ಎಂಬುದನ್ನು ಮನಗಂಡರು. ವಿವೇಕಾನಂದರು ಇದೇ ಬಂಡೆಯ ಮೇಲೆ ನರೇಂದ್ರ ದತ್ತ ನಿಂದ ಸ್ವಾಮಿ ವಿವೇಕಾನಂದರಾಗಿ ಸಂಪೂರ್ಣವಾಗಿ ಬದಲಾದರೆಂದರೆ ತಪ್ಪಾಗಲಾರದು. ಅಲ್ಲಿಂದ ತಮ್ಮ ಕೆಲಸದ ಸಂಕಲ್ಪ ಮಾಡಿ ಹೊರಟರು ಮುಂದೆ ನಡೆದಿದ್ದೆಲ್ಲವೂ ಇಂದು ಇತಿಹಾಸ.
ಅದೇ ಬಂಡೆಯ ಮೇಲೆ ಕನ್ನಿಕಾ ಮಾತೆ (ಪಾರ್ವತಿ ದೇವಿ) ತಪಸ್ಸು ಮಾಡಿದಳೆಂದು ಹೇಳಲಾಗುತ್ತದೆ. ಇಂತಹ ಪವಿತ್ರವಾದ ಸ್ಥಳದಲ್ಲಿ ೧೯೬೩ ರಲ್ಲಿ ವಿವೇಕಾನಂದರ ೧೦೦ ನೇ ಜನ್ಮ ದಿನದ ಪ್ರಯುಕ್ತ ಬಂಡೆಯ ಮೇಲೆ ವಿವೇಕಾನಂದರ ಸ್ಮಾರಕ ನಿರ್ಮಿಸುವ ಕುರಿತು ಚಿಂತನೆ ನಡೆಯಿತು . ಆದರೆ ಅದು ಅಷ್ಟೊಂದು ಸುಲಭವಾಗಿರಲಿಲ್ಲ ಕ್ರೈಸ್ತ ಮಿಷನರಿಗಳು ಅಲ್ಲಿ ಶಿಲುಬೆಯೊಂದನ್ನು ನಿಲ್ಲಿಸಿ ಅದು ೪೦೦ ವರ್ಷಗಳಿಂದ ಇಲ್ಲಿಯೇ ಇದೆ ಎಂಬ ವಾದ ಶುರುವಿಟ್ಟರು .ಇವತ್ತು ಕನ್ಯಾಕುಮಾರಿಯಲ್ಲಿ ''ವಿವೇಕಾನಂದರ ರಾಕ್ ಮೆಮೋರಿಯಲ್'' ಇದೆ ಎಂದಾದರೆ ಅದಕ್ಕೆ ಕಾರಣ ಶ್ರೀ ಏಕನಾಥ ರಾನಡೆಯವರು. ತುಕ್ಕು ಹಿಡಿಯುವದಕ್ಕಿಂತ ಸವೆದು ಹೋಗುವುದೇ ಲೇಸು ಎಂಬ ವಾಕ್ಯ ಕ್ಕೆ ತಕ್ಕುದಾಗಿ ಬದುಕಿದವರು ಇವರು. ಇವರ ಹೋರಾಟದ ಫಲವಾಗಿ ಸತತ ೭ ವರ್ಷಗಳ ಕಾರ್ಯಾಚರಣೆಯ ನಂತರ ೧೯೭೦ ರಲ್ಲಿ ವಿವೇಕಾನಂದರ ಸ್ಮಾರಕ ನಿರ್ಮಾಣವಾಯಿತು. ಏಕನಾಥ ರಾನಡೆಯವರು ಆರ್.ಎಸ್.ಎಸ್. ಸಂಘಟನೆಯ ಕಾರ್ಯಕರ್ತರು ಮತ್ತು ಮುಖ್ಯಸ್ಥರಾಗಿದ್ದವರು. ಸ್ಮಾರಕ ನಿರ್ಮಾಣಕ್ಕೆ ದೇಶದ ಮೂಲೆ ಮೂಲೆಗಳಿಂದಲೂ ಜನ ಹಗಲಿರುಳು ಶ್ರಮದಾನ ಮಾಡಿದರು. ಇಂದು ಇಡೀ ದೇಶದಲ್ಲಿ ವಿವೇಕಾನಂದರ ಆಶಯದ ದೇವಸ್ಥಾನ ಇರುವದು ಕನ್ಯಾಕುಮಾರಿಯಲ್ಲಿ ಮಾತ್ರ. ವಿವೇಕಾನಂದರ ೧೦೦ ನೇ ಜನ್ಮದಿನದ ಸ್ಮರಣಾರ್ಥ ರಾನಡೆಯವರು ''ವಿವೇಕಾನಂದ ರಾಕ್ ಮೆಮೋರಿಯಲ್ '' ನಿರ್ಮಿಸಿದರು , ಇವತ್ತು (ನವೆಂಬರ್ ೧೯-೨೦೧೪) ರಾನಡೆಯವರ ೧೦೦ ನೇ ಜನ್ಮದಿನ. ಬನ್ನಿ ಅವರ ತ್ಯಾಗವನ್ನು ನೆನೆಯೋಣ. ಇದೆ ಡಿಸೆಂಬರ್ ೨೫ ವಿವೇಕಾನಂದರು ಧ್ಯಾನ ಮಾಡಿದ ಆ ದಿನ ಮತ್ತೆ ಬರುತಲಿದೆ .ನಾವು ಈ ದಿನವನ್ನು ''ರಾಕ್ ಡೇ''ಯನ್ನಾಗಿ ಆಚರಿಸಲು ನಿರ್ಧರಿಸಿದ್ದೇವೆ. ಬನ್ನಿ ಆ ದಿನದಂದು ವಿವೇಕಾನಂದರು ಹಾಕಿ ಕೊಟ್ಟ ಮಾರ್ಗದಲ್ಲಿ ಅವರ ಚಿಂತನೆಗಳೊಡನೆ ದೇಶಕ್ಕಾಗಿ ಬದಕುವ ಸಂಕಲ್ಪವನ್ನು ಮಾಡೋಣ , ವಿವೇಕಾನಂದರು ಹೇಳಿದ ಮಾತು ''ಭಾರತ ಜಗದ್ಗುರು'' ಆಗುತ್ತಲಿದೆ ನೋಡಿ, ಉದಯಿಸುತ್ತಿರುವ ಸೂರ್ಯನ ಹಾಗೆ ಅದು ನಮ್ಮ ಕಣ್ಣಿಗೆ ಕಾಣಿಸುತ್ತಿದೆ" ಎಂದು. ಯುವ ಸಹೋದರರೇ ಎದ್ದು ಬನ್ನಿ ಈ ಬಾರಿಯ "ರಾಕ್ ಡೇ'' ಯನ್ನ ಯಶಸ್ವಿಯಾಗಿ ಆಚರಿಸೋಣ. ತನ್ಮೂಲಕ ವಿವೇಕಾನಂದರ ಸಂದೇಶವನ್ನು ಜಗತ್ತಿಗೆ ಹಂಚೋಣ. ಜೈಹಿಂದ್.
ಇಂತಿ - ಪವನ್
Thursday, January 16, 2014
ನನ್ನ ಮುಂಡಗೋಡ
ನಾನು ಈ ಉಪ್ಪಿನೋರಿಗೆ (ಗೋವೆಗೆ) ಬಂದು ಇವತ್ತಿಗೆ ಸರಿಯಾಗಿ 5 ವರ್ಷವಾಯಿತು(oct-16 2014) ,ಹಾಗೆ ನಾನು ಮಾಡುತ್ತಿರುವ ಇ ಕೆಲಸಕ್ಕು. ಜಿವನವನ್ನರಿಸಿ ನಾನು ಮುಂಡಗೊಡನ್ನು ಬಿಟ್ಟು 7 ವರ್ಷಗಳೇ ಕಳೆದವು ನಂತರದ ಈ ಜೀವನದಲ್ಲಿ ಪ್ರತಿಯೊಂದು ಬದಲಾಗುತ್ತ ಹೋಯಿತು .ನನ್ನ ಗೆಳೆಯರನ್ನು ಮಾತ್ರ ಬಿಟ್ಟು .ನನ್ನ ಜೀವನದ ಪ್ರತಿಯೊಂದು ಸಮಯದಲ್ಲು ನನ್ನ ಕೈ ಹಿಡಿದು ನಡೆದ ನನ್ನ ಗೆಳೆಯರಿಗೊಂದು ಸಲಾಮ್ .ನಾನು ಮುಂಡಗೊಡನ್ನು ಅದ್ಯಾವ್ ಪರಿ ಮಿಸ್ ಮಾಡಿಕೊಳ್ತೇನೆ ಅಂದ್ರೆ ನಮ್ಮೂರಿನ ಆ ನೆಲಕ್ಕೆ ಒಮ್ಮೆ ಮುತ್ತಿಟ್ಟು ಚುಂಬಿಸುವ ಆಸೆ ಆಗ್ಬಿಡುತ್ತೆ .ನನಗೆ ಎಲ್ಲರು ಹೇಳ್ತಾರೆ ನೀನು ಮುಂಡಗೊಡನ್ನು ಬಿಟ್ಟು ಹೋಗಿ ಒಳ್ಳೆಯ ಕೆಲಸ ಮಾಡಿದೆ ಅಲ್ಲೇ ಇರು ಆರಾಮಾಗಿ ಇರ್ತಿಯ ಅಂತ . ಆದ್ರೆ ಕಳೆದ 7 ವರ್ಷಗಳಿಂದ ನಾನು ಏನನ್ನು ಕಳಕೊಂಡಿದೇನೆ ನನಗೆ ಮಾತ್ರ ಗೊತ್ತು .ನನ್ನ ಊರಿನ ನೆನಪುಗಳು ಮಾತ್ರ ನನ್ನೆದೆಯಲಿ ಹಾಗೆ ಅಚ್ಹಾಗಿಯೇ ಉಳಿದಿವೆ . ಶತಮಾನಗಳೇ ಕಳೆದರು ಬದಲಾಗದೆ ನಿಂತಿರುವ ಆ ಬಸ್ ಸ್ಟಾಂಡ್ ,ನನ್ನ ಮನೆಯ ಮುಂದಿರುವ ದೇವಸ್ಥಾನ ಮತ್ತು ನನ್ನ 7 ನಂಬರಿನ ಡೊಳ್ಳು ,ಹೋಳಿ ಹಬ್ಬದ ಹಲಗೆ ಹೊಡೆತ ಕೊನೆಗೆ ಅಲ್ಲಿನ ಕನ್ನಡ ಭಾಷೆಯು ಕೊಡ ತುಂಬಾ ನೆನಪಾಗಿ ಕಾಡುತ್ತಿವೆ. ಜೀವನದಲ್ಲಿ ಏನ್ ಸಿಗದೇ ಇದ್ರೂ ಚಿಂತೆ ಇಲ್ಲ ಆದ್ರೆ ಬದಕು ಮಾತ್ರ ಮುಂಡಗೊಡ ನಲ್ಲೆ ಕಳೀಬೇಕು ಅನ್ನೋ ಆಸೆ ಆಗ್ತಾ ಇದೆ .
Subscribe to:
Posts (Atom)