Total Pageviews

Wednesday, January 14, 2015

‪#‎ಸಾವಿರದ_ವಿವೇಕಾನಂದ‬ ಮತ್ತು ಸಾರ್ಥಕತೆಯ ಕೆಲ ಕ್ಷಣಗಳು

 .
ನಾನು ವಿವೇಕಾನಂದ ಜಯಂತಿಯಂದು ಮಾತಾಡುವದೋ ಬೇಡವೋ ಎಂಬ ಗೊಂದಲದಲ್ಲೇ ಇದ್ದೆ ,ಯಾಕಂದ್ರೆ ವೇದಿಕೆ ಹತ್ತಿ ಕೈಯಲ್ಲಿ ಮೈಕು ಹಿಡಿದು ನಿಂತರೆ ಹೃದಯಾಳದಲ್ಲಿ ಚಿಕ್ಕ ನಡುಕ ,ಧ್ವನಿಯಲ್ಲೊಂದು ಅಳುಕು ಶುರುವಾಗ್ತಿತ್ತು. ಕೊನೆಗೆ ಮಾತನಾಡುವದು ಬೇಡವೆಂದೆ ನಿರ್ಧರಿಸಿ ಕುಳಿತೆ , ಆದ್ರೆ ಅನಿರಿಕ್ಷಿತವಾಗಿ ಕಾಲೆಜುಒಂದರಲ್ಲಿ ಮಾತಾಡುವ ಸರದಿ ನನ್ನದಾಗಿತ್ತು ಸ್ವಲ್ಪ ಗೊಂದಲದಲ್ಲೇ ಮಾತು ಮುಗಿಸಿ ಕೆಳಗಿಳದೆ. ಆದ್ರೆ ಮುಂದೆ ಅಂಧ ಮಕ್ಕಳ ಶಾಲೆಯಲ್ಲಿ ನನ್ನ ಸಹವರ್ತಿ ವಿವೇಕಾನಂದರ ಬಗ್ಗೆ ಮಾತಾಡುತ್ತಿರುವಾಗ ನಾನೇನೋ ತಪ್ಪು ಮಾಡುತ್ತಿರುವ ಭಾವನೆ ನನ್ನನ್ನು ಕಾಡಲು ಶುರುವಾಯಿತು . ಅಶ್ವಿನಿ ಅಕ್ಕ ಮತ್ತು ಅರುಣಿಮ ಅವರ ಜಿವನಗಾತೆಗಳನ್ನು ತಿಳಿದಿರುವ ನಾನು ಇವತ್ತು ಈ ಮಕ್ಕಳಿಗೆ ಹೇಳದೆ ಇಲ್ಲಿಂದ ಹೊರಟರೆ ನನ್ನ ಜೇವನದ ಬಹುದೊಡ್ಡ ತಪ್ಪಾಗಬಹುದೆಂದು ಭಾವಿಸಿ ನನ್ನ ಸಹವರ್ತಿಯ ಮಾತು ಮುಗಿದ ತಕ್ಷಣ ಅಲ್ಲೇ ಇದ್ದ ವಿವೇಕಾನಂದರ ಕಣ್ಣುಗಳನ್ನೊಮ್ಮೆ ದ್ರಷ್ಟಿಸಿ ಮಕ್ಕಳೆದುರು ನಿಂತು ನನ್ನ ಮಾತು ಶುರುವಾಗಿಸಿದೆ. ಅಶ್ವಿನಿ ಅಕ್ಕ ಮತ್ತು ಅರುಣಿಮ ಅವರ ಬಗ್ಗೆ ಹೇಳಿ ಮುಗಿಸುವದರೊಳಗೆ ಬೆಳಕನ್ನೇ ಕಾಣದ ಆ ಕಣ್ಣುಗಳಲ್ಲಿ ನನಗೆ ಮಿಂಚಿನ ಬೆಳಕೊಂದು ಕಂಡಂತಾಯಿತು . ಕೊನೆಗೆ ಇವರಿಗೆ ಸ್ಪೋರ್ತಿಯಾಗಿದ್ದು ಇದೆ ವಿವೇಕಾನಂದ ಎಂದು ಕೈ ಮಾಡಿ ಫೋಟೊವತ್ತ ತೋರಿಸಿದಾಗ ಚಪ್ಪಾಳೆಗಳ ಸುರಿಮಳೆಯಾಗಿ ನನಗೆ ನನ್ನ ಗುರುಗಳ ನೆನಪಾಗಿತ್ತು (ಪ್ರತ್ಯೇಕವಾಗಿ ಯಾರು ಅಂತ ಬೇರೆ ಹೇಳಬೇಕಾಗಿಲ್ಲ ) ನನ್ನ ಜೀವನದ ಸಾರ್ಥಕತೆಯ ಮತ್ತು ಶೂನ್ಯ ಭಾವದ ಕೆಲವು ಕ್ಷಣಗಳು ನನ್ನದಾಗಿತ್ತು . ಮುಂದೆ ಇನ್ನೊಂದು ಅಂದ ಮಕ್ಕಳ ಶಾಲೆಯಲ್ಲೂ ಇದೆ ಮರುಕಳಿಸಿತು . ಕೊನೆಗೆ ಇನ್ನೊಂದು ಪ್ರೌಢ ಶಾಲೆಯಲ್ಲಿ ನಾನು ಮಾತನಾಡಲು ಶುರುವಾಗಿಸಿದಾಗ ಬಹುಶ ನನ್ನಲ್ಲಿನ ಸಿಂಹಸದ್ರಶ ಮನಸ್ಸು ಜಾಗ್ರತವಾಗಿತ್ತು. ಮಕ್ಕಳು ಭಾರತ ಮಾತೆಗೆ ಕೊಟ್ಟ ಜೈಕಾರ ನಮ್ಮೆಲ್ಲರ ಕನಸಿನ ದಿನಗಳು ತುಂಬ ದೊರವಿಲ್ಲ ಎಂದೆನಿಸಿತು . ವೇದಿಕಇಂದ ಮೈಕನ್ನು ಬಿಟ್ಟು ಕೆಳಗಿಳಿಯಲು ಮನಸ್ಸಾಗುತ್ತಿರಲಿಲ್ಲ ಮಾತಾಡಿದಷ್ಟು ಕಡಿಮೆಯೇ ಅನಿಸುತಿತ್ತು ಸಮಯ ಅದಾಗಲೇ ೫ ಆಗಿತ್ತು . ಮನೆಗೆ ಬಂದ ಹೊಸ ಅತಿಥಿಯ ಆ ಪುಟ್ಟ ಕಣ್ಣುಗಳು ನೆನಪಾಗಿದ್ದವು. ಎಲ್ಲ ಮುಗಿಸಿ ಬೈಕನ್ನೇರಿ ಮನೆಗೆ ಹೊರಡುವಾಗ ನನ್ನ ಇನ್ನಿಬ್ಬರು ನೆಚ್ಚಿನ ಅಣ್ಣನವರ ಮುಖಗಳು ಅಕ್ಷಿಪಟಲದಿಂದ ಮನಸ್ಸಿನೊಳಗೆ ಹಾದುಹೋದವು.