“ಈ ದೇಶವನ್ನ ಪ್ರೀತಿಸುವರ ಆಲೋಚನೆ ಯಾವತ್ತಿಗೂ ಒಂದೇ “
Feb
14ರ ನನ್ನ ಪ್ರೀತಿ ನನ್ನ ದೇಶ ಕಾರ್ಯಕ್ರಮದ ಕುರಿತು ಹೇಳುವ ಮುಂಚೆ ಒಂದಿಷ್ಟು ವಿಚಾರವನ್ನ ಹೇಳಲೇಬೇಕು . ಈ ದೇಶದ ಸೈನಿಕರ ನಂತರ ಗಡಿಯೊಳಗೆ ಈ ದೇಶಕ್ಕಾಗಿ ಅವರು ಸಲ್ಲಿಸುವ ಸೇವೆ ಮತ್ತು ತ್ಯಾಗದ ಬಗ್ಗೆ ಯೋಚಿಸಿದ ಮೂವರಲ್ಲಿ ಪೊಲೀಸರು , ಈ ದೇಶವನ್ನು ಸದಾ ಸ್ವಚ್ಚವಾಗಿರಿಸೋ ಪೌರ ಕಾರ್ಮಿಕರು (ಮೂರನೆಯದನ್ನ ಸಧ್ಯಕ್ಕೆ ಹೇಳಲ್ಲ ). ಸೈನಿಕರ ನಂತರ ಈ ಮೂವರ ಬಗ್ಗೆ ಅತಿ ಹೆಚ್ಚು ಆಲೋಚಿಸಿದ್ದೆ ಇವರು ಈ ದೇಶಕ್ಕಾಗಿ ಮಾಡುತ್ತಿರುವ ಸೇವೆಗೆ ಯಾವದನ್ನು ಸಮರ್ಪಿಸಿದರೆ ಸರಿದೂಗಿಸಲು ಸಾಧ್ಯ ,,? ನಮ್ಮ ಯೋಧರಿಗೆ ಭಾವ ತುಂಬಿದ ಎರಡು ಹನಿ ಕಣ್ಣಿರಿನ ಹೊರತಾಗಿ ಇನ್ನೆನನ್ನೂ ಸಹ ನಾವು ಕೊಡಲಾರೆವು ...! ಇನ್ನುಳಿದ ಮೂವರು ತಾವು ಮಾಡುವ ಕೆಲಸದಲ್ಲಿ ಸ್ವಲ್ಪವು ಹೆಚ್ಚು ಕಡಿಮಿಯಾದರೆ ಈ ಸಮಾಜದಲ್ಲಿ ನಾವು ಬದುಕುವದೆ ಕಷ್ಟವಾಗುತ್ತದೆ . ಇಷ್ಟೆಲ್ಲಾ ಯೋಚಿಸುತ್ತಿರುವಾಗಲೇ ನವೆಂಬರ್ 26 ರ ರಂದು ತುಕಾರಾಂ ಒಂಬಳೆ ಎನ್ನುವ ಶ್ರೇಷ್ಠ ಪೊಲೀಸನನ್ನು ನೆನೆಯುತ್ತ ರಾಜ್ಯದ ಪೊಲೀಸರಿಗೆ ಚಿಕ್ಕ ಧನ್ಯವಾದವನ್ನು ಸಮರ್ಪಿಸಿದ್ದೆವು . ಅದೆಷ್ಟೋ ಪೊಲೀಸರು ಭಾವುಕರಾಗಿ ಪ್ರೀತಿಯಿಂದ ಮಾತಡಿದ್ದರೆಂದರೆ ನಾನೆ ಸ್ವತಹ ಎರೆಡು ಪೋಲಿಸ ಠಾಣೆಯಲ್ಲಿ ಕುಳಿತು ಅನುಭವಿಸಿ ಕಣ್ಣಾರೆ ಕಂಡು ಬಂದಿದ್ದೇನೆ . ಇನ್ನು Feb14 ರ ನನ್ನ ಪ್ರೀತಿ ನನ್ನ ದೇಶ ಕಾರ್ಯಕ್ರಮದ ರೂಪು ರೇಷೆ ಸಿದ್ದಗೊಳ್ಳುತ್ತಿದ್ದಂತೆ ಚಕ್ರವರ್ತಿ ಅಣ್ಣನಿಗೆ ಕರೆ ಮಾಡಿ ನೇರವಾಗಿಯೇ ಕೇಳಿದ್ದೆ ಅಣ್ಣ ಅದು ಹೇಗ್ ಸಾಧ್ಯ ಅಣ್ಣಾ ನಾನು ಯಾವದರ ಬಗ್ಗೆ ಯೋಚಿಸುತ್ತೇನೋ ಯುವಾ ಬ್ರಿಗೇಡ್ ನ ಮುಂದಿನ ಕೆಲಸ ಅದೇ ಆಗಿರುತ್ತದೆ ಹೇಗೆ ಅಂದಾಗ , ಉತ್ತರ ನನಗಾಗಿ ತಯಾರಿತ್ತು "ಯಾರು ಈ ದೇಶವನ್ನ ಪ್ರೀತಿಸುತ್ತಾರೋ ಅವರು ಆಲೋಚಿಸುವ ರೀತಿ ಯಾವತ್ತಿಗೂ ಒಂದೇ ಆಗಿರುತ್ತದೆ . ತಕ್ಷಣವೇ ನಾನು ಆಲೋಚಿಸುವ ಮೂರನೆಯವರ ಬಗ್ಗೆ ಕೇಳಿದಾಗ ನಗುತ್ತಲೇ ಹೇಳಿದರು ಚಕ್ರವರ್ತಿ ಅಣ್ಣ ಹೌದು ಕಣೋ ನನ್ನ ತಲೆಲು ಆ ವಿಚಾರ ಇದೆ ಸರಿಯಾದ ಸಮಯ ಬರಲಿ ಅದನ್ನು ಮಾಡೋಣ ಎಂದಾಗ ಈ ದೇಶವನ್ನ ಪ್ರೀತಿಸುವರ ಆಲೋಚನೆ ಯಾವತ್ತಿಗೂ ಒಂದೇ ಎನ್ನುವದು ನನಗೆ ಖಚಿತವಾಗಿತು.
Feb 14 ರ ಪ್ರೇಮಿಗಳ ದಿನಾಚರಣೆಯನ್ನು ಯುವಾ ಬ್ರಿಗೇಡ್ ಕಳೆದ ವರ್ಷದಿಂದ ದೇಶಪ್ರೇಮಿಗಳ ದಿನ ಅಂತ ಆಚರಿಸಲು ಶುರುಮಾಡಿದೆ , ಈ ವರ್ಷ ದೇಶಪ್ರೇಮಿಗಳ ದಿನದಂದು ಯಾರು ಈ ದೇಶವನ್ನ ಶತ ಶತಮಾನಗಳಿಂದ ಪ್ರತಿದಿನ ಸ್ವಚ್ಚವಾಗಿರಿಸೋ ಕೆಲಸವನ್ನು ಮಾಡುತ್ತಿದ್ದಾರೋ ಅಂದು ನಾವು ಅವರ ಗಲ್ಲಿಗಳಲ್ಲಿ ಹೋಗಿ ಸ್ವಚ್ಚತೆಯನ್ನು ಮಾಡಿ ಅವರಿಗೆ ನಮ್ಮ ಪ್ರೀತಿ ಮತ್ತು ಕಾಳಜಿಯನ್ನು , ನಿಮ್ಮ ಜೊತೆ ಸದಾ ನಾವಿದ್ದೇವೆ ಎಂಬ ಭರವಸೆಯನ್ನು ನೀಡಬೇಕಿತ್ತು . ಆದ್ರೆ ಇಲ್ಲಿ ಗೋವೆಯಲ್ಲಿ ಮಾಡುವದು ಅಷ್ಟೊಂದು ಸುಲಭದ ಕೆಲಸ ವಾಗಿರಲಿಲ್ಲ ಭಾಷೆಯ ಸಮಸ್ಯೆ ಒಂದು ಕಡೆಯಾದರೆ ಇನ್ನಿಲ್ಲಿ ನಮಗೆ ಪರಿಚಯ ಇರುವವರು ಯಾರು ಇರಲಿಲ್ಲ , ಅಂತೂ ಮಾಡಲೇ ಬೇಕು ಅಂತ ನಿರ್ಧರಿಸಿದಾಗ ಇವನ್ನೆಲ್ಲ ನೋಡುವ ಪ್ರಶ್ನೆಯೇ ಇಲ್ಲ , ಭಾರತ ಮಾತೆಯ ಮುದ್ದಿನ ಮಕ್ಕಳ ಹುಡುಕಾಟ ( ಪೌರ ಕಾರ್ಮಿಕರ )ಮಾಹಿತಿಯ ಕೆಲಸ ಶುರುವಾಯಿತು . ನಾನಿರುವ ಮನೆಯ ರಸ್ತೆಯಲ್ಲಿ ಸ್ವಚ್ಚತೆಗೆ ಬರುವ ಹುಡುಗನನ್ನು ಒಂದೆರಡು ಬಾರಿ ಮಾತನಾಡುವ ಪ್ರಯತ್ನ ವ್ಯರ್ಥವಾಯಿತು . ಆತ ನನ್ನೊಡನೆ ಮಾತನಾಡಲು ತಯಾರಿರಲಿಲ್ಲ ಅಷ್ಟೊಂದು ಸಮಯವೂ ಅವನಲ್ಲಿ ಇರಲಿಲ್ಲ ಆತನಿಗೆ ಅವನ ಕೆಲಸದ ಖಯಾಲಿ ಮಾತ್ರ . ಇನ್ನು ನೇರವಾಗಿ ಪೊಂಡಾ ನಗರ
ಪುರಸಭೆಯ ಕಂಟ್ರಾಕ್ಟರ್ ನನ್ನು ವಿಚಾರಿಸಿದಾಗ ಆತ ತನ್ನ ಮೇಲಧಿಕಾರಿ ಇಂಜೀನೀಯರ್ ಒಬ್ಬರ ಹತ್ತಿರ ಕಳುಹಿಸಿದ ಎಲ್ಲವನ್ನು ಕೇಳಿಸಿಕೊಂಡ ಆತ ಮಾಡುತ್ತಿರುವ ಕೆಲಸ ಏನೋ ಚೆನ್ನಾಗಿದೆ ಆದ್ರೆ ನೀನು ಚೀಫ್ ಆಫಿಸರ್ ಹತ್ತಿರ ಮಾತಾಡು ಅಂತ ಎಲ್ಲರು ತಮ್ಮ ಮೇಲಧಿಕಾರಿ ಹತ್ತಿರ ಕಳಿಸುತ್ತ ಹೋದರು ಕಾರಣ ಇಷ್ಟೇ ಅವರಿಗೆ ಯುವಾ ಬ್ರಿಗೇಡ್ ನ ಬಗ್ಗೆ ತಿಳಿದಿರಲಿಲ್ಲ ಮತ್ತು ಇದನ್ನ ಯಾಕಾಗಿ ನಾವು ಮಾಡುತ್ತಿದ್ದೇವೆ ಎಂಬುದು ಅವರಿಗೆ ಸ್ವಷ್ಟ ವಾಗಿರಲಿಲ್ಲ ಅವರು ಯಾರು ರಿಸ್ಕ್ ತೆಗೆದುಕೊಳ್ಳಲು ತಯಾರಿರಲಿಲ್ಲ. ಮಾರನೆಯ ದಿನ ಬೆಳಗ್ಗೆ ಎಲ್ಲ ಅಧಿಕಾರಿ ಮತ್ತು ಚೇರ್ ಪ್ರೆಸಿಡೆಂಟ್ ಎಲ್ಲರು ಒಟ್ಟಿಗೆ ಕುಳಿತು
20 ನಿಮಿಷ ಸಮಯದಲ್ಲಿ
ಅವರಿಗೆ ನಮ್ಮ ಉದ್ದೇಶ ನಮ್ಮ ಕೆಲಸದ ಗುರಿ ಮತ್ತು ಯುವಾ ಬ್ರಿಗೇಡ್ ನ ಬಗ್ಗೆ ತಿಳಿ ಹೇಳಿದಾಗ ಕೊನೆಗೂ ಎಲ್ಲರು ಸೇರಿ ಒಪ್ಪಿಗೆ ಸೂಚಿಸಿದ್ದರು .ನನ್ನ ಪ್ರೀತಿ ನನ್ನ ದೇಶ Feb 14th
ಮೊದಲೇ ನಿಗದಿಯಾದ ಸಮಯದ ಪ್ರಕಾರ ಶನಿವಾರ ಸಂಜೆ 5 ಘಂಟೆಗೆ ನನ್ನ ಕನ್ನಡದ ಯುವಾ ಬ್ರಿಗೇಡ್ ಮಿತ್ರರೆಲ್ಲರೂ ಸೇರಿ ಹೊರೆಟೆವು , 60 ಜನ ಪೌರ ಕಾರ್ಮಿಕರು ನಮಗಾಗಿ ಕಾಯುತ್ತ ಕುಳಿತಿದ್ದರು ಇಲ್ಲಿ ನಡೆಯುವದು ಏನು ಯಾವ ಕಾರ್ಯಕ್ರಮ ಯಾವದು ಅಂತ ಅವರ್ಯಾರಿಗೂ ಗೊತ್ತೇ ಇರಲಿಲ್ಲ ಸ್ವಲ್ಪ ಕಷ್ಟವೆನಿಸಿದರು ನಾನು ಹಿಂದಿಯಲ್ಲೇ ಮಾತನಾಡಲು ಶುರು ಮಾಡಿದೆ ನಾವು ಬಂದ ಕಾರಣ ಮತ್ತು ಅವರು ಮಾಡುತ್ತಿರುವ ಕೆಲಸದ ಬಗ್ಗೆ ನಮಗಿರುವ ಪ್ರೀತಿ ಮತ್ತು ಗೌರವವನ್ನು ಹೇಳಿ ಮುಗಿಸಿದೆ,
ದೇಶದ ಸೈನಿಕರ ಕಾರಣ ನಾವಿಂದು ಇಲ್ಲಿ ನೆಮ್ಮದಿಯ ನಿದ್ದೆ ಮಾಡ್ತಿದಿವಿ ಆದ್ರೆ ನಿಮ್ಮಿಂದಲೇ ನೀವು ಮಾಡುತ್ತಿರುವ ಕೆಲಸದಿಂದಲೇ ನಾವು ಆರಾಮಾಗಿ ಆರೋಗ್ಯವಾಗಿ ಇದಿವಿ , ಆ ಸೈನಿಕರಂತೆಯೇ ನೀವು ಸಹ ಮಾಡುತ್ತಿರುವದು ದೇಶ ಸೇವೆಯೇ ಎಂದ ಮಾತು ಅವರ ಮನಸ್ಸಿಗೆ ತಾಗಿತ್ತು . ಈ ಸಮಾಜದಲ್ಲಿ ಪ್ರತಿಯೊಬ್ಬರಿಗೂ ನಿಮ್ಮ ಮೇಲೆ ನೀವು ಮಾಡುತ್ತಿರುವ ಕೆಲಸದ ಬಗ್ಗೆ ಅಪಾರವಾದ ಪ್ರೀತಿ ಗೌರವ ಇದೆ ಆದ್ರೆ ವ್ಯಕ್ತ ಪಡಿಸುವಲ್ಲಿ ವಿಫಲರಾಗಿದ್ದಾರೆ ಆದರೆ ಇವತ್ತು ಅವರೆಲ್ಲರ ಪ್ರೀತಿಯನ್ನು ಹೊತ್ತು ನಾವು ನಿಮ್ಮಲ್ಲಿಗೆ ಬಂದಿದ್ದೇವೆ ನೀವು ಒಪ್ಪಿಕೊಳ್ಳಲೇ ಬೇಕು ಎಂದಾಗ ಅವರ ಬೆನ್ನು ಹುರಿ ನೆಟ್ಟಗಾಗಿದ್ದನ್ನು ಕಂಡೆ . ಕೊನೆಯಲ್ಲಿ ನಾವೆಲ್ಲರೂ ಸೇರಿ ಭಾರತ ಮಾತೆಗೆ ಜೈಕಾರ ಕೊಡೋಣ ಎಂದಾಗ ಅದರಲ್ಲೊಬ್ಬ ತಾಯಿ ಎದ್ದು ನಿಂತು ಎಲ್ಲರಿಗೂ ಸ್ವಲ್ಪ ಎತ್ತರದ ಧನಿಯಲ್ಲೇ ಆಜ್ಞೆ ಮಾಡಿದರು ಏಯ್ ಎಲ್ಲರು ಘಟ್ಟಿಯಾಗಿ ಹೇಳಿ ಅಂದಾಗ , ಅವರು ಭಾರತ ಮಾತೆಗೆ ಕೊಟ್ಟ ಜೈಕಾರ ಅದೆಷ್ಟು ಘಟ್ಟಿಯಾಗಿ ಇತ್ತೆಂದರೆ ನನ್ನ ಎದೆ
ಬಡಿತ ಒಂದು ಕ್ಷಣ ಸ್ತಬ್ದ ವಾದಂತೆ
ಭಾಸವಾಯಿತು , ಭಾರತ ವಿಶ್ವ ಗುರುವಿನ ಹಾದಿಯಲ್ಲಿ ಇದೆ ಎಂಬದು ನನಗೆ ಖಾತ್ರಿಯಾಗಿತ್ತು . ಎಲ್ಲ ಮುಗಿಸಿ ಹೊರಡಬೇಕು ಅನ್ನುವಷ್ಟರಲ್ಲಿ ಅವರಲ್ಲೊಬ್ಬರು ಬಂದು ಹೇಳಿದರು - ನಿವಾದರು ನಮ್ಮನ್ನು ಅರ್ಥ ಮಾಡಿಕೊಂಡರಲ್ಲ ನಮ್ಮನ್ನ ನಮ್ಮ ಕೆಲಸವನ್ನ ಕೀಳಾಗಿ ನೋಡದೆ ನಮಗೆ ಹೆಮ್ಮೆ ಮೂಡೊ ತರ ಮಾಡಿದಿರಲ್ಲ ನಾವು ನಿಮಗೆ ಧನ್ಯವಾದ ಹೇಳ್ಬೇಕು ಅಂದಾಗ ನಮ್ಮೆಲ್ಲರಲ್ಲಿ ಮೌನ ಮಾತಾಡಿತ್ತು ಅಷ್ಟೇ .
ಜೈ ಹಿಂದ್
ಪವನ್ ಹೆಬ್ಬಾರೆ
