4ನೇ ತಾರಿಖು
ಶನಿವಾರ ಸಂಜೆ ಹುತಾತ್ಮ ಭರತೆಶನಿಗೆ
ಶ್ರದ್ದಾಂಜಲಿ ಸಭೆ , 5 ನೇ
ತಾರಿಖು ಹಳಿಂಗಳಿಯಲ್ಲಿ 25000 ಸಸಿಗಳನ್ನು ನೆಡುವ
ಸಾಹಸದ ಕಾರ್ಯಕ್ರಮ
, ಹೊರಡುವದೋ ಬೇಡವು
ಎಂಬ ಗೊಂದಲದಲ್ಲೆ ಹೊರಟದ್ದಾಯಿತು , ಶನಿವಾರ ಬೆಳಗ್ಗೆ ಹೊರಟು ಅಥಣಿ
ತಲಪುವದಕ್ಕೆ ಸಂಜೆ 5:30 ದೀರ್ಘ
ಪ್ರಯಾಣ ಸ್ವಲ್ಪ ಆಯಾಸ , ಭರತೇಶನ
ಶ್ರದ್ದಾಂಜಲಿ ಸಭೆಯಲ್ಲಿ ನೆರೆದಿದ್ದ ಅಪಾರ ಜನಸ್ತೋಮದ ಮನಗಳು
ಭಾರವಾಗಿದ್ದವು , ಅಲ್ಲಿಂದ ರಾತ್ರಿ ಊಟ
ಮುಗ್ಗಿಸಿ ಭದ್ರಗಿರಿಗೆ ತಳಪುವದರೊಳಗೆ ಸಮಯ ಅದಾಗಲೇ 11
. ಇನ್ನೇನು ಮಲಗಬೇಕು ಎನ್ನುವದರೊಳಗೆ ,ಕಿರಣ್
ಅಣ್ಣ - ಪವನ್ ನೀ ನಡಿ
ನನ್ನ ಜೊತೆ ಅಂದ್ರು , ಆದೇಶ
ಪಾಲಿಸುವದೊಂದೇ ನನ್ನ ಕೆಲಸ ಹೂ ಎಂದು ಹೊರಟೆ
, ಹಳಿಂಗಳಿಯ
ದೊಡ್ಡ ಬೆಟ್ಟಕ್ಕೆ ಹೊರಟು ಬೆಳಗಿನ ಎಲ್ಲ
ತಯಾರಿ ನಡೆಸಿ , ತೋಡಿದ ಗುಂಡಿಯೇನ್ನಲ್ಲ
ಒಮ್ಮೆ ನೋಡಿ ರಾತ್ರಿ ಮರಳಿ
ಬರುವದೊರಳಗೆ ಸಮಯ ೩ ಘಂಟೆಯಾಗಿತ್ತು
. ಅದ್ಯಾರದು ಮನೆ ಗೊತ್ತಿಲ್ಲ ಮನೆಯ
ತಾರಿಸಿಯ ಮೇಲೆ ನೀರಾಶ್ರಿತರ ಶಿಬಿರದಲ್ಲಿರುವ
ತರಾ ಸಾಲಾಗಿ ಎಲ್ಲರು ಮಲಗಿದ್ದರು
, ಅಲ್ಲಿಯೇ ಯಾರದೋ ಚಾದರನ್ನು ಎಳೆದು
ಸಿಕ್ಕ ಜಾಗದಲ್ಲಿ ಮಲಗಿದೆ , ಬೆಳಗ್ಗೆ
ಚಕ್ರವರ್ತಿ ಅಣ್ಣನ ಧ್ವನಿಯನ್ನು ಕೇಳಿದಂತಾಗಿ
ಮುಸುಕು ಕಣ್ಣಿನಲ್ಲಿ ನೋಡಿದರೆ ಈ ಬದಿಗೆ
ವಿನಯ್ ಅಣ್ಣ ಮತ್ತೊಂದು ಬದಿಗೆ
ಚಕ್ರವರ್ತಿ ಅಣ್ಣ , ಇಷ್ಟೆಲ್ಲಾ ಹೇಳಲು
ಕಾರಣ ಯುವ ಬ್ರಿಗೆಡ್ ನ
ಸರಳತೆ ಮತ್ತು ನನ್ನ ನಿದ್ದೆ
ಸರಿಯಾಗಿಲ್ಲ ಎಂದು.
ಇನ್ನು ಭಧ್ರಗಿರಿಯ ಬೆಟ್ಟ , ನಾವೆಲ್ಲಾ ಉತ್ತರ
ಕರ್ನಾಟಕದ ಕಡೆಗಿನ ಬೆಟ್ಟಗಳನ್ನು ನೋಡಿದ್ದಿವಿ
ಬೋಳು ಬೆಟ್ಟಗಳು ದೊಡ್ಡ ಕಲ್ಲುಗಳು ಬಿಟ್ಟರೆ
ಜಾಲಿ ಮುಳ್ಳುಗಳು , ಇಂತಹ ಬೆಟ್ಟದಲ್ಲಿ ನಾವು
ಇವತ್ತು ಸಸಿಗಳನ್ನು ನೆಡಬೇಕು ,ಅದಕ್ಕಾಗಿ ಸುಮಾರು ೨೯೦೦೦ ಸಾವಿರ
ಸಸಿಗಳು ಮತ್ತು ೩-೪
ಸಾವಿರ ಯುವಶಕ್ತಿಯಿಂದ ಹಿಡಿದು ೯೦ ರ
ಅಜ್ಜಿಯವರೆಗೆ ಎಲ್ಲರು ಸಿದ್ದ , ಬೆಳಗ್ಗೆ
ಚಕ್ರವರ್ತಿ ಅಣ್ಣನ ಮಾತುಗಳಿಂದ ಪ್ರೇರಣೆ
ಪಡೆದು ನಮ್ಮ ಯುವ ಬ್ರಿಗೇಡಿಯರ್
ಗಳು ತಮ್ಮ ತಮ್ಮ ಬೆಟಾಲಿಯನ್
(ಗುಂಪಿನೊಂದಿಗೆ) ಮೊದಲೇ ನಿರ್ಧರಿಸಿದಂತೆ ಬೆಟ್ಟದ
ಮೂಲೇ ಮೂಲೆಯ ಕಡೆಗೂ ಹೊರಟರು
.
ಸಸಿನೆಡುವ
ಕಾರ್ಯ - ನಮ್ಮ ಗುಂಪಿನಲ್ಲಿ ನಾವುಂದು
೫೦ ಜನ ಸಸಿಯನ್ನು ನೆಡಬೇಕು
ಅಷ್ಟೊಂದು ಸುಲಭದ ಕೆಲಸವಲ್ಲ ಇಳಿಜಾರಿನ
ಬೆಟ್ಟ ನಡೆದಾಡಲು ಜಾಗವಿಲ್ಲ ಮಧ್ಯ ಮಧ್ಯ ಕಲ್ಲುಗಳು
, ನಮ್ಮ ಸ್ವಾಗತಕ್ಕೆ ಕಾದು ಕುಳಿತ ಜಾಲಿ
ಮುಳ್ಳುಗಳು , ಮೊದಲು ಮೇಲಿಂದ ಎಲ್ಲ
ಸಸಿಗಳುನ್ನು ಕೆಳಗಡೆ ಸಾಗಿಸಬೇಕು ಸುಮಾರು
ಒಂದು ಸಾವಿರ ಸಸಿಗಳು ಅಲ್ಲಿಂದ
ಗುಂಡಿ ತೊಡಿದಂತಹ ಜಾಗಕ್ಕೆ ಸಾಗಿಸಬೇಕು , ಮಧ್ಯ
ಯಾರೋ ಎಲ್ಲಿಂದಲೋ ಭಾರತ್ ಮಾತಾ ಕೀ
ಎನ್ನುವದು ಎಲ್ಲರು ಒಟ್ಟಿಗೆ ಜೈ
ಅನ್ನುವದು ಇದರ ಜೊತೆಗೆ ಬುಲೆಟ್
ನಲ್ಲಿ ಪೂರ್ತಿ ಬೆಟ್ಟವನ್ನು ತಿರುಗುತ್ತ
ಸ್ಪೂರ್ತಿಯನ್ನು ತುಂಬುವ ನಮ್ಮ ಬ್ರಿಗೇಡಿಯರ್
ಚಕ್ರವರ್ತಿ , ಕೆಲಸಕ್ಕೆ ಸ್ಫೂರ್ತಿ ಮತ್ತು ಕೆಲಸದ ವೇಗ
ಹೆಚ್ಚುತ್ತಿತ್ತು , ಈಗ ಸೂರ್ಯ ಸ್ವಲ್ಪ
ಮೇಲೆ ಬಂದಾಗಿತ್ತು ಗುಂಪಿನಲ್ಲಿರುವರ ಸಂಖ್ಯೆಯು ಕಡಿಮೆ ಯಾಗಿತ್ತು ಇನ್ನು
ಉತ್ತರ ಕರ್ನಾಟಕದ ಬಿಸಿಲಿನ ಬಗ್ಗೆ ಬೇರೆ ಹೇಳಬೇಕ
..?
ಮೊದಲನೇ
ಹಂತದ ಕೆಲಸವಾಗಿತ್ತು ಸಸಿಗಳನ್ನ ಭೂಮಿಯೊಳಗೆ ಹಾಕಿಯಾಗಿತ್ತು ಅದಕ್ಕಿಗ ನೀರು ಹಾಕುವ
ಕೇಲಸ ಅತ್ಯಂತ ಕಟಿಣವಾದದ್ದು , ಇವಗಳೆಲ್ಲ
ನಡುವೆ ನನಗೆ ಸ್ಪೂರ್ತಿಯಾದದ್ದು ತಾಯಿಯೊಬ್ಬರು
ಬೆಟ್ಟದ ಈ ಭಾಗದಿಂದ ಪೂರ್ತಿಯಾಗಿ
ತಿರುಗಿ ಸಸಿ ನೆಟ್ಟು ತೆಗೆದ
ಪ್ಲಾಸ್ಟಿಕ್ ಚಿಲಗಳನ್ನು ಒಟ್ಟು ಮಾಡುತ್ತಿದ್ದದ್ದು ಮತ್ತು
ಸ್ವತಹ ತಾವೇ ಸಸಿಗಗನ್ನು ಹೊತ್ತು
ಹೋಗಿ ನೆಡುತ್ತಿದ್ದರು ಅತ್ಯಂತ ಸಕ್ರಿಯವಾಗಿ ಕೆಲಸ
ಮಾಡುತ್ತಿದ್ದರು . ನನಗೆ ಸುಸ್ತಾಯಿತು ಆನಿಸಿದಾಗ
ಒಮ್ಮೆ ಆ ತಾಯಿಯತ್ತ ನೋಡಿ
ಮತ್ತೆ ಸ್ಪೂರ್ತಿಯಿಂದ ನನ್ನ ಕೆಲ್ಸಕ್ಕೆ ನಾನು
ಅಣಿಯಾಗುತ್ತಿದ್ದೆ , ಇಂತಹ ತಾಯಂದಿರ ಹಲವಾರು ಕಥೆಗಳನ್ನು ನನ್ನ
ಮಿತ್ರರು ಕೊನೆಯಲ್ಲಿ ನನಗೆ ಹೇಳಿದರು . ಸುಮಾರು
೧೨೦೦ ಸಸಿಗಳನ್ನು ನೆಟ್ಟಾಗಿತ್ತು ಈಗ
ಅದಕ್ಕೆ ನೀರು ಹಾಕಬೇಕು , ಕುಡಿಯಲು
ನೀರಿಲ್ಲ ನೀರನ್ನು ಕುಡಿಯಬೇಕಾದರು ಬೆಟ್ಟದ
ಆ ತುದಿಗೆ ಹೋಗಬೇಕು
. ತುಂಬಾ ಇಳಿಜಾರು ಮತ್ತು ಕಲ್ಲುಗಳಿರುವದರಿಂದ
ನೀರಿನ ಟ್ಯಾಂಕರ್ ಅರ್ಧ ಕಿಲೋಮಿಟರ ದೂರದಲ್ಲಿಯೆ
ನಿಂತಿತ್ತು . ಇದರ ಜೊತೆಗೆ ವಾಟ್ಸ್
ಪ್ ನಲ್ಲಿ
ಪದೇ ಪದೇ ಬರುವ ಮೆಸೆಜುಗಳ
ತರ ಜಾಲಿ ಮುಳ್ಳುಗಳು ಪ್ರತಿಯೊಬ್ಬರಿಗೂ
ಕಾಡಿದ್ದು ಸುಳ್ಳಲ್ಲ , ನಮ್ಮ ಗಂಟಲುಗಳು ಆರಿಹೊಗಿವೆ
ಸಸಿಗಳು ನೀರಿಲ್ಲದೆ ಭೂಮಿಯ ಒಡಲಲ್ಲಿ ನಿಂತಿವೆ
, ಯಾರೋ ಒಂದು ಕೊಡ ನೀರನ್ನು
ಮೆಲಿನಿಂದ ಹೊತ್ತು ತಂದರು ಅದರಲ್ಲಿ ಎಲ್ಲರು ಸ್ವಲ್ಪ
ನೀರನ್ನು ಕುಡಿದು ಜೊತೆಗೆ ಸುಮುಖ್
ಅಣ್ಣನ ಮಾತುಗಳಿಂದ ಪ್ರೇರಣೆ ಪಡೆದು ಅರ್ಧ ಕಿಲೋಮಿಟರ ದೂರದವರೆಗೂ
ಟ್ಯಾಂಕರ್ ನಿಂದ ಹೀಡಿದು ನಮ್ಮ ಭಾಗದ
ಈ ತುದಿಯ ವರೆಗೂ
ಸಾಲಾಗಿ ನಿಂತು
, ನೀರು ತುಂಬಿದ ಕೊಡಗಳು ಕೈಯಿಂದ
ಕೈ ಗೆ ಸಾಗಿ ಕೊನೆಯಲ್ಲಿ
ಸಸಿಗಳನ್ನು ತಂಪಾಗಿಸುತ್ತಿದ್ದವು ಇವಗಳ ನಡುವೆ ಭಾರತ
ಮಾತಾ ಕೀ ಜೈ , ವಂದೇ
ಮಾತರಂ ಘೋಷಣೆಗಲಿಂದ ಕೆಲಸದ ವೇಗ ಹೆಚ್ಚುತ್ತಿತ್ತು
, ಅದೇ ಸಮಯಕ್ಕೆ ಸರಿಯಾಗಿ ಸೂರ್ಯನಿಗೆ
ಮೋಡ ಮರೆಯಾಗಿ ತಂಪು ಗಾಳಿ
ಬಿಸಲು ಶುರುವಾಯಿತು . ಇತ್ತ ನಾವು ನೀರನ್ನು
ಹಾಕುತ್ತಿದ್ದರೆ ನಮ್ಮ ಭಾಗದ ಆ
ಬದಿಗೆ ಇನ್ನೊಂದಿಷ್ಟು ಜನ ಸಸಿ ಗಳನ್ನೂ
ನೆಡಲು ಶುರು ಮಾಡಿದ್ದರು ಸುಮಾರು
೧೫೦೦ ಸಸಿಗಳನ್ನು ನೆಟ್ಟು ನೀರುಣಿಸಿಯಾಗಿತ್ತು , ಯುದ್ದವನ್ನೇ
ಗೆದ್ದವೆಂಬ ಸಂಬ್ರಮ ಜೀವನದಲ್ಲಿ ಒಂದು
ಅನುಭವ ಮತ್ತು ನೆನಪಿನ ಮತ್ತೊಂದು
ಮೈಲಿಗಲ್ಲು. ಅದಾಗಲೇ
ಹೊಟ್ಟೆ ಚುರುಗುಡುತ್ತಿತ್ತು , ಹಾ ಇಷ್ಟೆಲ್ಲಾ ನಡೆದಿದ್ದು
ಬೆಟ್ಟದ ಒಂದು ಭಾಗದಲ್ಲಿ ಮಾತ್ರ
, ಆದರೆ ಇಂತಹ
ಸಹಸಮಯವಾದ ಕೆಲಸ ಹಳಿಂಗಳಿ ಬೆಟ್ಟದ
ಪೂರ್ತಿ ಪ್ರತಿ
ಭಾಗದಲ್ಲೂ ನಡೆದಿದೆ , ಇದುವೇ ನನ್ನ ಹೆಮ್ಮೆಯ
ಯುವಾ ಬ್ರಿಗೆಡ್ . ಎಲ್ಲಿ ಮಳೆಯಗುತ್ತೋ ಬಿಡತ್ತೋ
, ಆದ್ರೆ ಹಳಿಂಗಳಿಯಲ್ಲಿ
ಮಳೆ ಆಯ್ತಾ ..? ಅಂತ ಪ್ರತಿಯೊಬ್ಬ ಯುವಾ
ಬ್ರಿಗೇಡಿಯರ್ ಕೇಳದೆ ಇರಲಾರ
ಮರಳಿ ಮನೆಗೆ ಬಂದ ಮೇಲೆ
ಗೊತ್ತಾಯಿತು ಅವತ್ತು ರಾತ್ರಿ ಅಲ್ಲಿ
ಮಳೆಯಾಯಿತು ಅಂತ , ಮುನಿಶ್ವರ ಸ್ವಾಮಿಗಳು
4 ದಿನಗಳಿಂದ ಮಳೆ
ಬರುವದಕ್ಕಾಗಿ ನೀರನ್ನು ಸಹ ಕುಡಿಯದೆ ಮಾಡುತ್ತಿದ
ಉಪವಾಸದ ಹಠಯೋಗ ಫಲಕೊಟ್ಟಿತ್ತು.
ಪವನ್ ಹೆಬ್ಬಾರೆ



