Total Pageviews

Wednesday, August 31, 2016

ಸ್ವಾತಂತ್ರದ ಶ್ರಾವಣ

ಸ್ವಾತಂತ್ರ್ಯದ ಶ್ರಾವಣ ಇದು ಸ್ವಾತಂತ್ರ್ಯದ ಹಬ್ಬ

ಮೊದಲೆಲ್ಲ ಸ್ವಾತಂತ್ರ್ಯತ್ಸೋವ ಬಂದರೆ ತುಂಬಾ ಖುಷಿಯ ವಿಚಾರ ಬಳಿ ಬಟ್ಟೆಗಳಿಗೆ ನೀಲಿ ಹಾಕಿ ತೊಳೆದು ಇಸ್ತ್ರಿ ಮಾಡಿಸಿ ಬೂಟುಗಳನ್ನೂಮ್ಮೆ ತಿಕ್ಕಿ ಅಚ್ಚುಕಟ್ಟಾಗಿ ಶಾಲೆಯ ಕಡೆಗೆ ಹೋದ್ರೆ ಅಲ್ಲಿ ನಿತ್ಯದಕ್ಕಿಂತ ಬದಲಾದ  ವಾತಾವರಣವೇ ಇರುತಿತ್ತು ,ಬಣ್ಣದ ಬಣ್ಣದ ಪೆಪರುಗಳು ತಳಿರು ತೋರಣ ದೇಶಭಕ್ತಿಗೀತೆ ಒಂದಿಷ್ಟು ಪುಟ್ಟ ಮಕ್ಕಳ ಮುದ್ದು ಧ್ವಯಲ್ಲಿ ಸ್ವಾತಂತ್ರ್ಯದ ಭಾಷಣ  ಒಟ್ಟಲ್ಲಿ ಸಂಭ್ರಮದ ವಾತಾವರಣ ಇದೆಲ್ಲವನ್ನು  ಮುಗಿಸಿ ಒಂದೆರಡು ಘಂಟೆ ಬಿಟ್ಟು ಶಾಲೆಯ ಹತ್ತಿರ ಮರಳಿ ಬಂದು ನೋಡಿದರೆ ಅದ್ಯಾವದರ ಸದ್ದು ಸಂಭ್ರಮ ಸಹ ಉಳಿದಿತ್ತಿರುವದಿಲ್ಲ ಬಾನೆತ್ತರಕ್ಕೆ ಏರಿದ ಬಾವುಟ  ಮಾತ್ರ ತನ್ನಷ್ಟಕ್ಕೆ ತಾನು ಹಾರಡುತ್ತಿರುತ್ತಿತ್ತು , ಮಾರನೇ ದಿನ ಶಾಲೆಗೇ ಬಂದರೆ ಅರೆ ನಿನ್ನೆ ಹಾರಿಸಿದ ಬಾವುಟ ಇವತ್ತಿಲ್ಲವಲ್ಲ ಅದನ್ನ ಇಳಿಸಿದವರು ಯಾರು ಎಂಬ ಪ್ರಶ್ನೆ ಮನಸ್ಸಿನಲ್ಲಿ ಹಾಗೆ ಸುಳಿದು ಹೋಗುತ್ತಿತ್ತು ಇದಿಷ್ಟನ್ನೆ ನೋಡಿ ನೋಡಿ ಸ್ವಾತಂತ್ರ್ಯ ದಿನಾಚರಣೆ ಅಂದ್ರೆ ಇಷ್ಟೇ ಅನ್ನೋ ಲೆಕ್ಕಕ್ಕೆ ಮನಸ್ಸು ವಾಲಿಯಾಗಿತ್ತು ಇನ್ನು ಕಾಲೇಜಿನಲ್ಲಿ ಇದ್ದಾಗಲಂತೂ ಒಂದಿಷ್ಟು ಸರ್ತಿ ಅಂದು ಮಲಗಿಕೊಂಡಿದ್ದು ಇನ್ನು ಮರೆತಿಲ್ಲ . ಇವೆಗಳ್ಳವನ್ನೂ ದಾಟಿ ಕೆಲಸಕ್ಕೆ ಸೇರಿದ ಮೆಲಂತೂ ,ಸ್ವಾತಂತ್ರ್ಯ ದಿನಾಚರಣೆ ಕೇವಲ ರಜೆಯ ದಿನವಾಗಿ ಮಾರ್ಪಾಡಾಗಿತ್ತು ರಜೆ ಇದ್ದರು ಇಲ್ಲ ಸಲ್ಲದ ಕಾರಣ ಕೊಟ್ಟು ಕೆಲಸಕ್ಕೆ ಕರೆದು ದುಡಿಸಿಕೊಳ್ಳುವರಿಗೆ ಇವತ್ತಿಗೂ ಬರವಿಲ್ಲ ಬಿಡಿ , ಇಷ್ಟೆಲ್ಲ ಆಲೋಚನೆಗಳ ಮಧ್ಯೆ ಮನಸ್ಸು ಘರ್ಷಣೆಗೆ ಬಿದ್ದಂತೆ ಆಲೂಚಿಸುತ್ತಿತ್ತು ಸ್ವಾತಂತ್ರ್ಯ ಸಿಕ್ಕು ಇನ್ನು 100 ವರ್ಷಗಳು ಸಹ ಪೂರ್ಣಗೊಂಡಿಲ್ಲ , ದೇಶಕ್ಕಾಗಿ ಹರಿದ ರಕ್ತದ ಕಲೆಗಳಿನ್ನು ಮಾಸಿಲ್ಲ ಅದೆಷ್ಟು ಬೇಗ ಎಲ್ಲವನ್ನು ಮರೆತೇ ಬಿಟ್ಟೆವು ನಾವು, ಹಬ್ಬದಂತೆ ಆಚರಿಸಬೆಕಿದ್ದ , ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ವೀರರನ್ನ ಅವರ ಅಮರಗಾಥೆಗಳನ್ನ ಬರುವ ಪೀಳಿಗೆಯ ಮಕ್ಕಳಿಗೆ ಹೇಳುತ್ತ ಸದ್ರಡ ಭಾರತದತ್ತ ಹೆಜ್ಜೆಯನ್ನಿಡಬೆಕಿತ್ತು ಇವನ್ನೆಲ್ಲ ಯೋಚಿಸಿತ್ತಿರುವಾಗಲೇ ರಿಂಗಣಿಸಿವ ಮೊಬೈಲು ಮತ್ತೆ ವಾಸ್ತವಕ್ಕೆ ಮರಳಿ ಕರೆತರುತ್ತಿತ್ತು , ಮತ್ತದೇ ನಮ್ಮ ದಿನನಿತ್ಯದ ಚಕ್ರದ ಬದುಕಿನಲ್ಲಿ ಎಲ್ಲವು ಮರೆತೊಗುತ್ತಿತ್ತು . ಯುವಾ ಬ್ರಿಗೇಡ್ ನ ಸೇರಿಕೊಂಡು ಒಂದಿಷ್ಟು ಚಿಕ್ಕ ಪುಟ್ಟ ನನ್ನ ಕೈಲಾದ ಕೆಲಸವನ್ನು ಮಾಡಿದ ಮೇಲೆ ಮನಸ್ಸು ಒಂದಿಷ್ಟು ಆದರು ಇಂತಹ ಯೋಚನೆಗಳಿಂದ ಮುಕ್ತವಾಗುತ್ತಿತ್ತು. ಆದರೆ ಸ್ವಾತಂತ್ರ್ಯದ ಆಚರಣೆ ಯಾಕೋ ಮನಸ್ಸಿಗೆ ನೆಮ್ಮದಿ ತರುತ್ತಿರಲಿಲ್ಲ ಎನಾಗುತ್ತಿದೆಯೋ ಹಾಗಲ್ಲ ಇನ್ನೇನೋ ಆಗಬೇಕು ಆದರೆ ಏನು ಅನ್ನೋದು ಕಲ್ಪನೆಗೆ  ಸಿಗುತ್ತಿರಲಿಲ್ಲ  , ಆದರೆ ಕಳೆದ ಸ್ವಾತಂತ್ರ್ಯ ದಿನಾಚರಣೆ ಮನಸ್ಸಿಗೆ ನೆಮ್ಮದಿ ತರುವಂತದ್ದಾಗಿತ್ತು , ಸ್ವಾತಂತ್ರ್ಯದ ಆಚರಣೇ ಹಬ್ಬವಾಗಿ ಬದಲಾಗಿತ್ತು ಇಡಿಯ ದಿನ ಸ್ವಾತಂತ್ರ್ಯದ ಆಚರಣೆ ರಾಷ್ಟ್ರದ ಬಗೆಗಿನ ಚಿಂತನೆ   ನಡೆಯಿತು ಅದುವೇ ಯುವಾ ಬ್ರಿಗೇಡ್ ನ ಸ್ವಾತಂತ್ರದ ಶ್ರಾವಣ , ನನ್ನ ಒಂದಿಷ್ಟು ತಮಾಷೆಯಾ ಪ್ರಶ್ನೆ ಗಳಿಗೆ ನಿಜವಾದ ಉತ್ತರ ಸಿಕ್ಕಿತ್ತು 
ಸ್ವಾತಂತ್ರ್ಯದ ಶ್ರಾವಣ
ಪೂರ್ವ ನಿಯೋಜನೆಯಂತೆ ಈ ಬಾರಿ ಹುಬ್ಬಳ್ಳಿಯಲ್ಲಿ ಸ್ವಾತಂತ್ರ್ಯದ ಹಬ್ಬವನ್ನು ಆಚರಿಸಲು ನಿರ್ಧರಿಸಲಾಗಿತ್ತು . ಈ ಆಚರಣೆಯ ಕಲ್ಪನೆಯೇ ಅದ್ಬುತ , ರಾಜ್ಯದ ಮೂಲೆ ಮೂಲೆಯಿಂದ ಆಗಮಿಸಿದ ತರುಣರು ಬರುವಾಗ  ತಮ್ಮೂರಿನ /ತಮ್ಮ ಭಾಗದ ವಿಶೇಷ ತಿಂಡಿ ತಿನಿಸುಗಳನ್ನ ತಮ್ಮ ಸಾಂಪ್ರದಾಯಿಕ ಉಡುಗೆಯಲ್ಲಿ ಆಗಮಿಸಿದ್ದರು . ಬಿಳಿಯ ಕುರ್ತಾ , ಪಂಚೆ ಜೊತೆಗೆ ಒಂದಿಷ್ಟು ತರುಣರು ಕೇಸರಿ ಪೇಟ ಸುತ್ತಿದ್ದರೇ ಇನ್ನೊಂದಿಷ್ಟು ತರುಣರು ಹಸಿರು ಪೇಟ , ಎಲ್ಲರ ಎದೆಯ ಮೇಲೆ ಮಿಂಚುವ ತ್ರಿವರ್ಣ ಧ್ವಜದ ಚಿತ್ರಕ್ಕಿಂತ ಎದೆಯ ಒಳಗಿರುವ ಚಿತ್ರವೇ ಸೂರ್ಯನಂತೆ ಪ್ರಜ್ವಲಿಸುತ್ತಿತ್ತು . ಯುವಾ ಬ್ರಿಗೇಡ್ ನ ಈ ಸ್ವಾತಂತ್ರ್ಯದ ಹಬ್ಬಕ್ಕೆ ಕ್ಯಾಪ್ಟನ್ ನವೀನ ನಾಗಪ್ಪ ಅವರ ಉಪಸ್ಥಿತಿ ತರುಣರ ಹುರಪನ್ನು ಇನ್ನು ಹೆಚ್ಚುಸಿತ್ತು , ಮೊದಲಿಗೆ ಶುರುವಾಗಿದ್ದೆ ಭಾರತ ಮಾತೆಯ ಅಡ್ಡ ಪಲ್ಲಕ್ಕಿ ಉತ್ಸವ , ಭಾರತಾಂಬೆಯ ಪಲ್ಲಕ್ಕಿ ಹೊರಟರೆ ಅದರ ಮೇಲೆ 100 ಮೀಟರ್ ಗಿಂತ ಉದ್ದದ ತ್ರಿವರ್ಣ ಧ್ವಜ , ಏಲ್ಲೆಲ್ಲೂ , ಎಲ್ಲರ ಕೈಯಲ್ಲಿ  ಕಾಣುವ ಬಾವುಟ , ಜೊತೆಗೆ ಆಶೀರ್ವಾದ ಎಂಬಂತೆ ತುಂತುರು ಮಳೆ ಭಾರತ ಮಾತೆಯ ಜೈಕಾರ . ಪಲ್ಲಕ್ಕಿ ಹೊರಟ ತಕ್ಷಣ ಭಾರತಾಂಬೆಯ ಗುಣಗಾನದಲ್ಲಿ ಭಾರತ ಮಾತಾ ಕೀ ಜೈ ಎನ್ನುತ್ತ ಖುಷಿಯಿಂದ ಕುಣಿದಾಡತೊಡಗಿದರು . ಇಂತಹ ಮೈ ಮರೆಸುವ ವಾತಾವರಣದ ಮಧ್ಯೇ ಪಲ್ಲಕ್ಕಿಯಲ್ಲಿ ನೋಡಿದರೆ ಸಾಕ್ಷಾತ್ ಭಾರತಾಂಬೆಯೇ ಪ್ರತ್ಯಕ್ಷವಾದಂತೇ ಇತ್ತು . ವಿವೇಕಾನಂದರ ಕನಸಿನ ಭಾರತದ ನೋಟವನ್ನ ಎಲ್ಲರು ಕಣ್ತುಂಬಿ ಆನಂದಿಸಿದ್ದರು. ನಂತರ ಕ್ಯಾಪ್ಟನ್ ನವೀನ ನಾಗಪ್ಪ ಅವರಿಂದ ನಡೆದ  ಧ್ವಜಾರೋಹಣ ಮತ್ತು  ಭಾರತ ಮಾತೆಯ ಆರತಿ ಬೆಳಗುವದರ ಜೊತೆ ಭಾರತಾಂಬೆಯ ಪೂಜೆ ನೆರವೇರಿತು . ಯುವಾ ಬ್ರಿಗೇಡ್ ನ ರಾಜ್ಯ ಸಂಚಾಲಕರಾದ ಶ್ರೀ ನಿತ್ಯಾನಂದ ವಿವೆಕವಂಶಿ ಎಲ್ಲರನ್ನು ಸ್ವಾಗತಿಸಿ ಅಂದಿನ ಕಾರ್ಯಕ್ರಮಗಳ ಬಗ್ಗೆ ವಿವರಣೆಯನ್ನು ನೀಡಿದರು  ಅನಂತರ ಮಾತನಾಡಿದ ಕ್ಯಾಪ್ಟನ್ ನವೀನ ನಾಗಪ್ಪ ಅವರು ತಾವು ಅನುಭವಿಸಿದ ಕಾರ್ಗಿಲ್ ಭೂಮಿಯ ಯುದ್ಧದ  ದ್ರಶ್ಯಗಳನ್ನೂ  ಎಳೆ ಎಳೇಯಾಗಿ ಬಿಡಿಸಿಟ್ಟು ಯುವಾ ಬ್ರಿಗೇಡ್ ನ ಕೆಲಸದ ಬಗ್ಗೆ ಮತ್ತು ತರುಣರ ಬಗ್ಗೆ ಮೆಚ್ಚುಗೆಯ  ಮಾತುಗಳನ್ನಾಡಿದಾಗ ಇನ್ನು ಹೆಚ್ಚಿನ ಕೆಲಸವನ್ನು ರಾಷ್ಟ್ರಕ್ಕಾಗಿ  ಮಾಡುವ ಉತ್ಸಾಹ ಯುವಕರಲ್ಲಿ ಇಮ್ಮಡಿಯಾಯಿತು. ಸುಮಾರು 50 ವರ್ಷಗಳಿಂದ ರಾಷ್ಟ್ರ ಧ್ವಜವನ್ನು ತಯಾರಿಸುತ್ತಿರುವ ಶ್ರೀಯುತ ರಾಮದಾಸ್ ಹೊರಟ್ಟಿಯವರು, 1942 ಭಾರತ ಬಿಟ್ಟು ತೊಲಗಿ ಚಳುವಳಿಯಲ್ಲಿ ಭಾಗವಹಿಸಿ ಹುತಾತ್ಮರಾದ ಶ್ರೀ ನಾರಾಯಣ ಡೋಣಿ ಯವರ ತಮ್ಮನ ಮಗನಾದ ಶ್ರೀ ಖಂಡೊಬಾ ಡೋಣಿರವರು ಅತಿಥಿಗಳಾಗಿ ಆಗಮಿಸಿದ್ದರು. ಮುಖ್ಯ ಅತಿಥಿಗಳಾದ ಶ್ರೀಯುತ ರಾಮದಾಸ್ ಹೊರಟ್ಟಿಯವರು ಮಾತನಾಡಿ ರಾಷ್ಟ್ರ ಧ್ವಜದ ಮಹತ್ವದ ಬಗ್ಗೆ ಅರಿವು ಮೂಡಿಸಿದರು ಇಂತಹ ಸಂಧರ್ಭದಲ್ಲಿ ಚಕ್ರವರ್ತಿ ಅಣ್ಣನ ವಿಶ್ವ ಗುರು ಪುಸ್ತಕ ಬಿಡುಗಡೆ ಆಯಿತು.  ರಾಷ್ಟ್ರಶಕ್ತಿ ಕೇಂದ್ರದ ಶ್ರೀ ರಾಜೇಶ್ ಮತ್ತು ತಂಡದವರು ವಾದ್ಯಗಳ ಜೊತೆಗೆ ಮೊಳಗಿಸಿದ ದೇಶಭಕ್ತಿಗೀತೆಗಳ ಗಾಯನ ನೆರೆದಿದ್ದ ತರುಣರನ್ನು ರೋಮಾಂಚಿತರಾಗುವಂತೆ ಮಾಡಿತು .ಅನಂತರ ನಡೆದಿದ್ದೆ ಸಾಂಸ್ಕ್ರತಿಕ ಕಾರ್ಯಕ್ರಮ , ಯುವಾ ಬ್ರಿಗೇಡ್ ನ ತರುಣರೆ ಇದನ್ನ ನಡೆಸಿಕೊಟ್ಟಿದ್ದೆ ವಿಶೇಷವಾಗಿತ್ತು ಚಿಕ್ಕ ಬಾಲಕಿಯ ಝಾನ್ಸಿ ರಾಣಿಯ ಪಾತ್ರ ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡದ ಯಕ್ಷಗಾನ ಮತ್ತು ಕರಾವಳಿಯ ಸಂಸ್ಕೃತಿಯ  ಸಾಂಪ್ರದಾಯಿಕ ಪಾತ್ರಗಳು ಅದ್ಭುತವಾಗಿ ನಡೆದವು , ಬೆಂಗಳೂರಿನ ತರುಣರು ನಡೆಸಿ ಕೊಟ್ಟ ಪತಿತ ಪಾವನ ನಾಟಕ ಎಲ್ಲರ ಮನ ಮುಟ್ಟುವಂತಿತ್ತು , ಸಂಗೊಳ್ಳಿ ರಾಯಣ್ಣನ ಪಾತ್ರ  ಮತ್ತು ಶಿವಮೊಗ್ಗದ ವಿನಯ್ ಭಾಯ್ ಹಾಗು ವಿದ್ಯಾ ರಾಘವೇಂದ್ರ ಅವರ ನ್ರತ್ಯ ವಾತಾವರಣವನ್ನೇ ಬದಲಾಯಿಸಿದವು ಕೊಪ್ಪಳದ ತಂಡ ಭಗತ್ ಸಿಂಗ್ ರ ಪ್ರೇರಿತ  ನಾಟಕ ಪ್ರದರ್ಶಿಸಿತು. ಅಬ್ಬಾ ಇಷ್ಟೆಲ್ಲ ನಡೆಯೂ ಅಷ್ಟರೋಳಗೆ ಸಮಯ ಓಡಿದ್ದೆ ತಿಳಿಯಲಿಲ್ಲ ಅಂತೂ ಊಟದ ಸಮಯ ಆಗಿತ್ತು
ಕರ್ನಾಟಕದ ಊಟವೆಲ್ಲ ಒಂದೇ ತಟ್ಟೆಯಲ್ಲಿ
ಅಬ್ಬಾ ಊಟವನ್ನ ಮಾಡೋದು ದೂರ ನೂಡುವದಕ್ಕೂ ಕಣ್ಣು  ಸಾಲುತ್ತಿರಲಿಲ್ಲ ಅಷ್ಟೊಂದು ಬಗೆ ಬಗೆಯ ಅಡುಗೆ ಮತ್ತು ಕರ್ನಾಟಕದ ಎಲ್ಲ ಪ್ರಸಿದ್ಧ ತಿಂಡಿ ತಿನಿಸುಗಳು ಅಲ್ಲಿದ್ದವು ಬಾಗಲಕೋಟೆಯ ಅಮೆನಗಧ ಕರದಂಟು, ಸವದತ್ತಿಯ ಚಪಾತಿ, ಹಾವೇರಿಯ ಗದಗಿನ ಖಡಕ್ ರೊಟ್ಟಿ, ಯಾದಗಿರಿಯ ಸಜ್ಜೆ ರೊಟ್ಟಿ, ಬಳ್ಳಾರಿಯ ಶೇಂಗಾ ಹೋಳಿಗೆ ಮತ್ತು ಉಂಡೆ, ಮಂಗಳೂರಿನ ಪತ್ರೊಡೆ, ಉತ್ತರ ಕನ್ನಡದ ಪಾತೋಳಿ, ಸಿಹಿ ತಿಂಡಿಗಳು, ವಿಜಯಪೂರದಿಂದ ಎಳ್ಳಿನ ಹೋಳಿಗೆ, ಗೋವಾದಿಂದ ಗೋಡಂಬಿ, ಕೊಪ್ಪಳದ ಸಿಹಿ ತಿಂಡಿಗಳು, ಬೆಂಗಳೂರಿನ ಚಕ್ಕುಲಿ ನಿಪ್ಪಟ್ಟು ಅವರೆಕಾಯಿಂದ ಮಾಡಿದ ತಿಂಡಿ, ಶಿವಮೊಗ್ಗದ ಕುಟ್ಟವಲಕಿ ಶೇಂಗಾ ,ಗುರಳ್ಳು ಅಗಸಿ ಚಟ್ನಿಗಳು  ಇನ್ನು ಹೆಸರೇ ಗೊತ್ತಿಲ್ಲದ ತಿಂದ ಹಲವಾರು ಬಗೆಯ ತಿನಿಸಗಳು ,ಮತ್ತೊಮ್ಮೆ ಇಂತಹ ಊಟ ಇನ್ಯಾವತ್ತಾದರು ನನಗೆ ಸಿಗಬಹುದ ಗೊತ್ತಿಲ್ಲ .
        ಊಟದ ಅನಂತರದಲ್ಲಿ ಎಲ್ಲ ತರುಣರು ಸೇರಿಕೊಂಡ ಮೇಲೆ ಮಾತನಾಡಲು ಆರಂಭಿಸಿದ ನಮ್ಮೆಲ್ಲರ ಮಾರ್ಗದರ್ಶಿ ಚಕ್ರವರ್ತಿ ಅಣ್ಣ ಸ್ವಾತಂತ್ರ್ಯದ ನಿಜವಾದ ಕಥೆಗಳನ್ನು ದೆಶವಿಭಜನೆಯಂತ ದುರಂತದ ಇತಿಹಾಸದ ಕಥೆಗಳನ್ನು ನಮ್ಮ ಮುಂದೆ ತೆರೆದಿಟ್ಟರು (ಇವತ್ತಿನ ಈ ರಾಷ್ಟ್ರದ ಸಮಸ್ಯೆಗಳ ಮೂಲ ಇತಿಹಾಸದಲ್ಲಿ ನಡೆದ ಚಿಕ್ಕ ಚಿಕ್ಕ ತಪ್ಪುಗಳೇ ಎಂಬುದು ನನ್ನ ಅರಿವಿಗೆ ಬಂದಿತ್ತು) ವಾಸ್ತವದ ಭಾರತ ನಡೆಯುತ್ತಿರುವ ದಿಕ್ಕು ಮತ್ತು ಸ್ಥಿತಿ ಗತಿಗಳನ್ನು ಒಂದೊಂದೇ ಕೇಳುತ್ತಿದ್ದರೆ ಭಾರತ ವಿಶ್ವ ಗುರುವಿಗೆ ತೀರ ಹತ್ತಿರದಲ್ಲಿರುವಂತೆ ಅನಿಸತೊಡಗಿತ್ತು . ಹೌದು ಭಾರತ ಬದಲಾವಣೆಯ ಹಂತದಲ್ಲಿ ಇದೆ ವಿವೇಕಾನಂದರು ಹೇಳಿದ ಮಾತು ಸತ್ಯವಾಗುವತ್ತ ಹೊರಟಿದೆ ಇನ್ನು ಬದಲಾಗಬೆಕಿರುವದು ನಾವು ಮಾತ್ರ , ಇವಗಳೆಲ್ಲದರ ಮಧ್ಯ ಕಳೆದು ಸಮಯ ಕಳೆದದ್ದೆ ಗೊತ್ತಾಗಲಿಲ್ಲ . ಸಂಜೆ ರಾಷ್ಟ್ರ ಗೀತೆಯನ್ನು ಹಾಡಿ ದ್ವಜವನ್ನು ಕೆಳಗಿಳಿಸಲಾಯಿತು, ಸಾಮೂಹಿಕವಾಗಿ ಭಾರತ ಮಾತೆಯ ಅಷ್ಟೋತ್ತರವನ್ನು ಜಪಿಸುವದರ ಮೂಲಕ ಭಾರತ ಮಾತೆಗೆ ಆರತಿಯನ್ನು ಬೆಳಗಿ ಸ್ವಾತಂತ್ರ್ಯದ ಹಬ್ಬಕ್ಕೆ ತೆರೆ ಎಳೇಯಲಾಯಿತು
ಅಂತೂ ಮೊದಲನೇ ಬಾರಿಗೆ ಸ್ವಾತಂತ್ರ್ಯ ದಿನಾಚರಣೆಯನ್ನು ಹಬ್ಬದಂತೆ ಆಚರಿಸಲಾಯಿತು , ಬೆಳಗ್ಗೆಯಿಂದ ಸಂಜೆಯವರೆಗೂ ತರುಣರ ಉತ್ಸಾಹ ಒಂದಿಷ್ಟು ಕುಗ್ಗಿರಲಿಲ್ಲ , ಪೂರ್ತಿ  ದಿನ ರಾಷ್ಟ್ರ, ಸಂಸ್ಕ್ರತಿ ಆಚರಣೆಗಳ ಕುರಿತು ಚಿಂತನೆ ಮತ್ತು ರಾಷ್ಟ್ರಕ್ಕಾಗಿ ಬದುಕುವ ಸಂಕಲ್ಪ ,. ವ್ಹಾ ಏನು ಸುಂದರವಾದ ಹಬ್ಬ , ಮೊದಲನೇ ಬಾರಿಗೆ ನಾನಂತು ಅರ್ಥಪೂರ್ಣವಾದ ಸ್ವಾತಂತ್ರ್ಯ ಉತ್ಸವವನ್ನು ಆಚರಿಸಿದಂತಾಯಿತು  ಈ ಗುಂಗಿನಿಂದ ಹೊರ ಬರಲು ಎರಡು ಮೂರೂ ದಿನಗಳೇ ಬೇಕಾಯಿತು. ದೇಶವನ್ನು ಒಡೆಯುವ ಕೈಗಳು ನೂರೆಂಟು ಇರಲಿ ದೇಶವನ್ನ ರಕ್ಷಿಸಲು ಕೋಟಿ ಕೋಟಿ ಕೈ ಗಳು ಯಾವತ್ತಿಗೂ ಸಿದ್ಧವಾಗಿವೆ , ಬ್ರಿಟಿಷರ ಬೂಟುಗಾಲು ನೆಕ್ಕುವ ಜನ ಆ ಕಾಲಕ್ಕೂ ಇದ್ದರು ಇವತ್ತಿಗೂ ಇದ್ದಾರೆ , ಆದ್ರೆ ದೇಶವನ್ನ ರಕ್ಷಿಸುವ ಸಮರ್ಥವಾದ ರಾಷ್ಟ್ರ ನಿರ್ಮಾಣ ನಮ್ಮೆಲ್ಲರ ಗುರಿಯಾಗಿರಲಿ , ಇದೆ ಗುರಿಯೊಂದಿಗೆ ನಾವೆಲ್ಲರೂ ರಾಷ್ಟ್ರಕ್ಕಾಗಿ ಬದುಕುವ ಸಂಕಲ್ಪವನ್ನ ಮಾಡೋಣ

Wednesday, February 17, 2016

 “ಈ ದೇಶವನ್ನ ಪ್ರೀತಿಸುವರ ಆಲೋಚನೆ ಯಾವತ್ತಿಗೂ ಒಂದೇ “

    ದೇಶವನ್ನ ಪ್ರೀತಿಸುವರ ಆಲೋಚನೆ ಯಾವತ್ತಿಗೂ ಒಂದೇ

      Feb 14ರ ನನ್ನ ಪ್ರೀತಿ ನನ್ನ ದೇಶ ಕಾರ್ಯಕ್ರಮದ ಕುರಿತು ಹೇಳು ಮುಂಚೆ ಒಂದಿಷ್ಟು ವಿಚಾರವನ್ನ ಹೇಳಲೇಬೇಕು . ದೇಶದ ಸೈನಿಕರ ನಂತರ ಗಡಿಯೊಳಗೆ ದೇಶಕ್ಕಾಗಿ ಅವರು ಸಲ್ಲಿಸುವ ಸೇವೆ ಮತ್ತು ತ್ಯಾಗದ ಬಗ್ಗೆ ಯೋಚಿಸಿದ ಮೂವರಲ್ಲಿ ಪೊಲೀಸರು , ದೇಶವನ್ನು ಸದಾ ಸ್ವಚ್ಚವಾಗಿರಿಸೋ ಪೌರ ಕಾರ್ಮಿಕರು (ಮೂರನೆಯದನ್ನ ಸಧ್ಯಕ್ಕೆ ಹೇಳಲ್ಲ ). ಸೈನಿಕರ ನಂತರ ಮೂವರ ಬಗ್ಗೆ ಅತಿ ಹೆಚ್ಚು ಆಲೋಚಿಸಿದ್ದೆ ಇವರು ದೇಶಕ್ಕಾಗಿ ಮಾಡುತ್ತಿರುವ ಸೇವೆಗೆ ಯಾವದನ್ನು ಸಮರ್ಪಿಸಿದರೆ ಸರಿದೂಗಿಸಲು ಸಾಧ್ಯ ,,? ನಮ್ಮ ಯೋಧರಿಗೆ ಭಾವ ತುಂಬಿದ ಎರಡು ಹನಿ ಕಣ್ಣಿರಿನ ಹೊರತಾಗಿ ಇನ್ನೆನನ್ನೂ ಸಹ ನಾವು ಕೊಡಲಾರೆವು ...! ಇನ್ನುಳಿದ ಮೂವರು ತಾವು ಮಾಡುವ ಕೆಲಸದಲ್ಲಿ ಸ್ವಲ್ಪವು ಹೆಚ್ಚು ಕಡಿಮಿಯಾದರೆ ಸಮಾಜದಲ್ಲಿ ನಾವು ಬದುಕುವದೆ ಕಷ್ಟವಾಗುತ್ತದೆ . ಇಷ್ಟೆಲ್ಲಾ ಯೋಚಿಸುತ್ತಿರುವಾಗಲೇ ನವೆಂಬರ್ 26 ರಂದು ತುಕಾರಾಂ ಒಂಬಳೆ ಎನ್ನುವ ಶ್ರೇಷ್ಠ ಪೊಲೀಸನನ್ನು ನೆನೆಯುತ್ತ ರಾಜ್ಯದ ಪೊಲೀಸರಿಗೆ ಚಿಕ್ಕ ಧನ್ಯವಾದವನ್ನು ಸಮರ್ಪಿಸಿದ್ದೆವು . ಅದೆಷ್ಟೋ ಪೊಲೀಸರು ಭಾವುಕರಾಗಿ ಪ್ರೀತಿಯಿಂದ ಮಾತಡಿದ್ದರೆಂದರೆ ನಾನೆ ಸ್ವತಹ ಎರೆಡು ಪೋಲಿಸ ಠಾಣೆಯಲ್ಲಿ ಕುಳಿತು ಅನುಭವಿಸಿ ಕಣ್ಣಾರೆ ಕಂಡು ಬಂದಿದ್ದೇನೆ . ಇನ್ನು Feb14 ನನ್ನ ಪ್ರೀತಿ ನನ್ನ ದೇಶ ಕಾರ್ಯಕ್ರಮದ ರೂಪು ರೇಷೆ ಸಿದ್ದಗೊಳ್ಳುತ್ತಿದ್ದಂತೆ ಚಕ್ರವರ್ತಿ ಅಣ್ಣನಿಗೆ ಕರೆ ಮಾಡಿ ನೇರವಾಗಿಯೇ ಕೇಳಿದ್ದೆ ಅಣ್ಣ ಅದು ಹೇಗ್ ಸಾಧ್ಯ  ಅಣ್ಣಾ ನಾನು ಯಾವದರ  ಬಗ್ಗೆ ಯೋಚಿಸುತ್ತೇನೋ ಯುವಾ ಬ್ರಿಗೇಡ್ ಮುಂದಿನ ಕೆಲಸ ಅದೇ ಆಗಿರುತ್ತದೆ ಹೇಗೆ ಅಂದಾಗ , ಉತ್ತರ ನನಗಾಗಿ ತಯಾರಿತ್ತು "ಯಾರು ದೇಶವನ್ನ ಪ್ರೀತಿಸುತ್ತಾರೋ ಅವರು ಆಲೋಚಿಸುವ ರೀತಿ ಯಾವತ್ತಿಗೂ ಒಂದೇ ಆಗಿರುತ್ತದೆ . ತಕ್ಷಣವೇ ನಾನು ಆಲೋಚಿಸುವ ಮೂರನೆಯವರ ಬಗ್ಗೆ ಕೇಳಿದಾಗ ನಗುತ್ತಲೇ ಹೇಳಿದರು ಚಕ್ರವರ್ತಿ ಅಣ್ಣ ಹೌದು ಕಣೋ ನನ್ನ ತಲೆಲು ವಿಚಾರ ಇದೆ ಸರಿಯಾದ ಸಮಯ ಬರಲಿ ಅದನ್ನು ಮಾಡೋಣ ಎಂದಾಗ ದೇಶವನ್ನ ಪ್ರೀತಿಸುವರ ಆಲೋಚನೆ ಯಾವತ್ತಿಗೂ ಒಂದೇ ಎನ್ನುವದು ನನಗೆ ಖಚಿತವಾಗಿತು.




        Feb 14 ಪ್ರೇಮಿಗಳ ದಿನಾಚರಣೆಯನ್ನು ಯುವಾ ಬ್ರಿಗೇಡ್ ಕಳೆದ ವರ್ಷದಿಂದ ದೇಶಪ್ರೇಮಿಗಳ ದಿನ ಅಂತ ಆಚರಿಸಲು ಶುರುಮಾಡಿದೆ , ವರ್ಷ ದೇಶಪ್ರೇಮಿಗಳ ದಿನದಂದು ಯಾರು ದೇಶವನ್ನ ಶತ ಶತಮಾನಗಳಿಂದ ಪ್ರತಿದಿನ ಸ್ವಚ್ಚವಾಗಿರಿಸೋ ಕೆಲಸವನ್ನು ಮಾಡುತ್ತಿದ್ದಾರೋ ಅಂದು ನಾವು ಅವರ ಗಲ್ಲಿಗಳಲ್ಲಿ ಹೋಗಿ ಸ್ವಚ್ಚತೆಯನ್ನು ಮಾಡಿ ಅವರಿಗೆ ನಮ್ಮ ಪ್ರೀತಿ ಮತ್ತು ಕಾಳಜಿಯನ್ನು , ನಿಮ್ಮ ಜೊತೆ ಸದಾ ನಾವಿದ್ದೇವೆ ಎಂಬ ಭರವಸೆಯನ್ನು ನೀಡಬೇಕಿತ್ತು . ಆದ್ರೆ ಇಲ್ಲಿ ಗೋವೆಯಲ್ಲಿ ಮಾಡುವದು ಅಷ್ಟೊಂದು ಸುಲಭದ ಕೆಲಸ ವಾಗಿರಲಿಲ್ಲ ಭಾಷೆಯ ಸಮಸ್ಯೆ ಒಂದು ಕಡೆಯಾದರೆ ಇನ್ನಿಲ್ಲಿ ನಮಗೆ ಪರಿಚಯ ಇರುವವರು ಯಾರು ಇರಲಿಲ್ಲ , ಅಂತೂ ಮಾಡಲೇ ಬೇಕು ಅಂತ ನಿರ್ಧರಿಸಿದಾಗ ಇವನ್ನೆಲ್ಲ ನೋಡುವ ಪ್ರಶ್ನೆಯೇ ಇಲ್ಲ , ಭಾರತ ಮಾತೆಯ ಮುದ್ದಿನ ಮಕ್ಕಳ ಹುಡುಕಾಟ ( ಪೌರ ಕಾರ್ಮಿಕರ )ಮಾಹಿತಿಯ ಕೆಲಸ ಶುರುವಾಯಿತು . ನಾನಿರುವ ಮನೆಯ ರಸ್ತೆಯಲ್ಲಿ ಸ್ವಚ್ಚತೆಗೆ ಬರುವ ಹುಡುಗನನ್ನು ಒಂದೆರಡು ಬಾರಿ ಮಾತನಾಡುವ ಪ್ರಯತ್ನ ವ್ಯರ್ಥವಾಯಿತು . ಆತ ನನ್ನೊಡನೆ ಮಾತನಾಡಲು ತಯಾರಿರಲಿಲ್ಲ ಅಷ್ಟೊಂದು ಸಮಯವೂ ಅವನಲ್ಲಿ ಇರಲಿಲ್ಲ ಆತನಿಗೆ ಅವನ ಕೆಲಸದ ಖಯಾಲಿ ಮಾತ್ರ . ಇನ್ನು ನೇರವಾಗಿ ಪೊಂಡಾ ನಗರ  ಪುರಸಭೆಯ ಕಂಟ್ರಾಕ್ಟರ್ ನನ್ನು ವಿಚಾರಿಸಿದಾಗ ಆತ ತನ್ನ ಮೇಲಧಿಕಾರಿ ಇಂಜೀನೀಯರ್ ಒಬ್ಬರ ಹತ್ತಿರ ಕಳುಹಿಸಿದ ಎಲ್ಲವನ್ನು ಕೇಳಿಸಿಕೊಂಡ ಆತ ಮಾಡುತ್ತಿರುವ ಕೆಲಸ ಏನೋ ಚೆನ್ನಾಗಿದೆ ಆದ್ರೆ ನೀನು ಚೀಫ್ ಆಫಿಸರ್ ಹತ್ತಿರ ಮಾತಾಡು ಅಂತ ಎಲ್ಲರು ತಮ್ಮ ಮೇಲಧಿಕಾರಿ ಹತ್ತಿರ ಕಳಿಸುತ್ತ ಹೋದರು ಕಾರಣ ಇಷ್ಟೇ ಅವರಿಗೆ ಯುವಾ ಬ್ರಿಗೇಡ್ ಬಗ್ಗೆ ತಿಳಿದಿರಲಿಲ್ಲ ಮತ್ತು ಇದನ್ನ ಯಾಕಾಗಿ ನಾವು ಮಾಡುತ್ತಿದ್ದೇವೆ ಎಂಬುದು ಅವರಿಗೆ ಸ್ವಷ್ಟ ವಾಗಿರಲಿಲ್ಲ ಅವರು ಯಾರು ರಿಸ್ಕ್ ತೆಗೆದುಕೊಳ್ಳಲು ತಯಾರಿರಲಿಲ್ಲ. ಮಾರನೆಯ ದಿನ ಬೆಳಗ್ಗೆ ಎಲ್ಲ ಅಧಿಕಾರಿ ಮತ್ತು ಚೇರ್ ಪ್ರೆಸಿಡೆಂಟ್ ಎಲ್ಲರು ಒಟ್ಟಿಗೆ ಕುಳಿತು  20 ನಿಮಿಷ ಸಮಯದಲ್ಲಿ  ಅವರಿಗೆ ನಮ್ಮ ಉದ್ದೇಶ ನಮ್ಮ ಕೆಲಸದ ಗುರಿ ಮತ್ತು ಯುವಾ ಬ್ರಿಗೇಡ್ ಬಗ್ಗೆ ತಿಳಿ ಹೇಳಿದಾಗ ಕೊನೆಗೂ ಎಲ್ಲರು ಸೇರಿ ಒಪ್ಪಿಗೆ ಸೂಚಿಸಿದ್ದರು .

ನನ್ನ ಪ್ರೀತಿ ನನ್ನ ದೇಶ Feb 14th



  ಮೊದಲೇ ನಿಗದಿಯಾದ ಸಮಯದ ಪ್ರಕಾರ ಶನಿವಾರ ಸಂಜೆ 5 ಘಂಟೆಗೆ ನನ್ನ ಕನ್ನಡದ ಯುವಾ ಬ್ರಿಗೇಡ್ ಮಿತ್ರರೆಲ್ಲರೂ ಸೇರಿ ಹೊರೆಟೆವು , 60 ಜನ ಪೌರ ಕಾರ್ಮಿಕರು ನಮಗಾಗಿ ಕಾಯುತ್ತ ಕುಳಿತಿದ್ದರು ಇಲ್ಲಿ ನಡೆಯುವದು ಏನು ಯಾವ ಕಾರ್ಯಕ್ರಮ ಯಾವದು ಅಂತ ಅವರ್ಯಾರಿಗೂ ಗೊತ್ತೇ ಇರಲಿಲ್ಲ ಸ್ವಲ್ಪ ಕಷ್ಟವೆನಿಸಿದರು ನಾನು ಹಿಂದಿಯಲ್ಲೇ ಮಾತನಾಡಲು ಶುರು ಮಾಡಿದೆ ನಾವು ಬಂದ ಕಾರಣ ಮತ್ತು ಅವರು ಮಾಡುತ್ತಿರುವ ಕೆಲಸದ ಬಗ್ಗೆ ನಮಗಿರುವ ಪ್ರೀತಿ ಮತ್ತು ಗೌರವವನ್ನು ಹೇಳಿ ಮುಗಿಸಿದೆದೇಶದ ಸೈನಿಕರ ಕಾರಣ ನಾವಿಂದು ಇಲ್ಲಿ ನೆಮ್ಮದಿಯ ನಿದ್ದೆ ಮಾಡ್ತಿದಿವಿ ಆದ್ರೆ ನಿಮ್ಮಿಂದಲೇ ನೀವು ಮಾಡುತ್ತಿರುವ ಕೆಲಸದಿಂದಲೇ ನಾವು ಆರಾಮಾಗಿ ಆರೋಗ್ಯವಾಗಿ ಇದಿವಿ , ಸೈನಿಕರಂತೆಯೇ ನೀವು ಸಹ ಮಾಡುತ್ತಿರುವದು ದೇಶ ಸೇವೆಯೇ ಎಂದ ಮಾತು ಅವರ ಮನಸ್ಸಿಗೆ ತಾಗಿತ್ತು . ಸಮಾಜದಲ್ಲಿ ಪ್ರತಿಯೊಬ್ಬರಿಗೂ ನಿಮ್ಮ ಮೇಲೆ ನೀವು ಮಾಡುತ್ತಿರುವ ಕೆಲಸದ ಬಗ್ಗೆ ಅಪಾರವಾದ ಪ್ರೀತಿ ಗೌರವ ಇದೆ ಆದ್ರೆ ವ್ಯಕ್ತ ಪಡಿಸುವಲ್ಲಿ ವಿಫಲರಾಗಿದ್ದಾರೆ ಆದರೆ ಇವತ್ತು ಅವರೆಲ್ಲರ ಪ್ರೀತಿಯನ್ನು ಹೊತ್ತು ನಾವು ನಿಮ್ಮಲ್ಲಿಗೆ ಬಂದಿದ್ದೇವೆ ನೀವು ಒಪ್ಪಿಕೊಳ್ಳಲೇ ಬೇಕು ಎಂದಾಗ ಅವರ ಬೆನ್ನು ಹುರಿ ನೆಟ್ಟಗಾಗಿದ್ದನ್ನು ಕಂಡೆ . ಕೊನೆಯಲ್ಲಿ ನಾವೆಲ್ಲರೂ ಸೇರಿ ಭಾರತ ಮಾತೆಗೆ ಜೈಕಾರ ಕೊಡೋಣ ಎಂದಾಗ ಅದರಲ್ಲೊಬ್ಬ ತಾಯಿ ಎದ್ದು ನಿಂತು ಎಲ್ಲರಿಗೂ ಸ್ವಲ್ಪ ಎತ್ತರದ ಧನಿಯಲ್ಲೇ ಆಜ್ಞೆ ಮಾಡಿದರು ಏಯ್ ಎಲ್ಲರು ಘಟ್ಟಿಯಾಗಿ ಹೇಳಿ ಅಂದಾಗ , ಅವರು ಭಾರತ ಮಾತೆಗೆ ಕೊಟ್ಟ ಜೈಕಾರ ಅದೆಷ್ಟು ಘಟ್ಟಿಯಾಗಿ ಇತ್ತೆಂದರೆ ನನ್ನ ಎದೆ  ಬಡಿತ ಒಂದು ಕ್ಷಣ ಸ್ತಬ್ದ ವಾದಂತೆ  ಭಾಸವಾಯಿತು , ಭಾರತ ವಿಶ್ವ ಗುರುವಿನ ಹಾದಿಯಲ್ಲಿ ಇದೆ ಎಂಬದು ನನಗೆ ಖಾತ್ರಿಯಾಗಿತ್ತು . ಎಲ್ಲ ಮುಗಿಸಿ ಹೊರಡಬೇಕು ಅನ್ನುವಷ್ಟರಲ್ಲಿ ಅವರಲ್ಲೊಬ್ಬರು ಬಂದು ಹೇಳಿದರು - ನಿವಾದರು ನಮ್ಮನ್ನು ಅರ್ಥ ಮಾಡಿಕೊಂಡರಲ್ಲ ನಮ್ಮನ್ನ ನಮ್ಮ ಕೆಲಸವನ್ನ ಕೀಳಾಗಿ ನೋಡದೆ ನಮಗೆ ಹೆಮ್ಮೆ ಮೂಡೊ ತರ ಮಾಡಿದಿರಲ್ಲ ನಾವು ನಿಮಗೆ ಧನ್ಯವಾದ ಹೇಳ್ಬೇಕು ಅಂದಾಗ ನಮ್ಮೆಲ್ಲರಲ್ಲಿ ಮೌನ ಮಾತಾಡಿತ್ತು ಅಷ್ಟೇ .




ಜೈ ಹಿಂದ್

ಪವನ್ ಹೆಬ್ಬಾರೆ