ಅಬ್ಬಾ ಊಟವನ್ನ ಮಾಡೋದು ದೂರ ನೂಡುವದಕ್ಕೂ ಕಣ್ಣು ಸಾಲುತ್ತಿರಲಿಲ್ಲ ಅಷ್ಟೊಂದು ಬಗೆ ಬಗೆಯ ಅಡುಗೆ ಮತ್ತು ಕರ್ನಾಟಕದ ಎಲ್ಲ ಪ್ರಸಿದ್ಧ ತಿಂಡಿ ತಿನಿಸುಗಳು ಅಲ್ಲಿದ್ದವು ಬಾಗಲಕೋಟೆಯ ಅಮೆನಗಧ ಕರದಂಟು, ಸವದತ್ತಿಯ ಚಪಾತಿ, ಹಾವೇರಿಯ ಗದಗಿನ ಖಡಕ್ ರೊಟ್ಟಿ, ಯಾದಗಿರಿಯ ಸಜ್ಜೆ ರೊಟ್ಟಿ, ಬಳ್ಳಾರಿಯ ಶೇಂಗಾ ಹೋಳಿಗೆ ಮತ್ತು ಉಂಡೆ, ಮಂಗಳೂರಿನ ಪತ್ರೊಡೆ, ಉತ್ತರ ಕನ್ನಡದ ಪಾತೋಳಿ, ಸಿಹಿ ತಿಂಡಿಗಳು, ವಿಜಯಪೂರದಿಂದ ಎಳ್ಳಿನ ಹೋಳಿಗೆ, ಗೋವಾದಿಂದ ಗೋಡಂಬಿ, ಕೊಪ್ಪಳದ ಸಿಹಿ ತಿಂಡಿಗಳು, ಬೆಂಗಳೂರಿನ ಚಕ್ಕುಲಿ ನಿಪ್ಪಟ್ಟು ಅವರೆಕಾಯಿಂದ ಮಾಡಿದ ತಿಂಡಿ, ಶಿವಮೊಗ್ಗದ ಕುಟ್ಟವಲಕಿ ಶೇಂಗಾ ,ಗುರಳ್ಳು ಅಗಸಿ ಚಟ್ನಿಗಳು ಇನ್ನು ಹೆಸರೇ ಗೊತ್ತಿಲ್ಲದ ತಿಂದ ಹಲವಾರು ಬಗೆಯ ತಿನಿಸಗಳು ,ಮತ್ತೊಮ್ಮೆ ಇಂತಹ ಊಟ ಇನ್ಯಾವತ್ತಾದರು ನನಗೆ ಸಿಗಬಹುದ ಗೊತ್ತಿಲ್ಲ .
No comments:
Post a Comment