Total Pageviews

Tuesday, December 1, 2015

ವೀರ ಯೋಧ ವಿನೋದ್ ನಾಯ್ಕ್

  

ವೀರ ಯೋಧ ವಿನೋದ್ ನಾಯ್ಕ್

 ಆವತ್ತು ಅಗಸ್ಟ್ 18-2015 ಬೆಳಿಗ್ಗೆ ಪತ್ರಿಕೆಯೊಂದರ ಪುಟದಲ್ಲಿ ಸೈನಿಕ ಹುತಾತ್ಮನಾದ 10 ನೇ ವರ್ಷದ ಸ್ಮರಣೆಯ ಪ್ರಯುಕ್ತ ಚಿಕ್ಕ ನೆನಪಿನ ಸ್ಮರಣೆಯನ್ನು ಆತನ ತಂದೆ ಪ್ರತಿ ವರ್ಷದಂತೆ ವರ್ಷದ ಪತ್ರಿಕೆಯಲ್ಲಿ ಪ್ರಕಟಿಸಿದ್ದರು. ವೀರ ಯೋಧ ಕಾರವಾರದ ವಿನೋದ ಮಹಾದೇವ ನಾಯ್ಕ, ಸ್ಮರಣೆಯನ್ನು ನೋಡಿದ ಕೂಡಲೆ ಜಿಲ್ಲೆಯ ಯುವ ಬ್ರಿಗೇಡ್ ತರುಣರು ಕಾರವಾರದ ಕಡವಾಡದಲ್ಲಿರುವ ವೀರ ಯೋಧನ ಮನೆಗೆ ಹೊರಟು ನಿಂತರು. ಸೈನಿಕರು ಎಂದರೆ ಪ್ರೀತಿ ಗೌರವ ಮತ್ತು ಹೆಮ್ಮೆ ಯುವಾ ಬ್ರಿಗೇಡಿಗೆ ಯಾವತ್ತು ಇದೆ. ಇನ್ನು ಸೈನಿಕನ ಬಗ್ಗೆ ತಿಳಿದುಕೊಳ್ಳುವುದು ಸೈನಿಕರ ಜೊತೆ ಮಾತನಾಡುವುದ ಯುವಾ ಬ್ರಿಗೇಡಿನ ತರುಣರಿಗೆ ಅತ್ಯಂತ ಪ್ರಿಯವಾದ ಕೆಲಸ.
ಮಧ್ಯಾಹ್ನದ ನಂತರ ಮನೆಗೆ ತಲುಪಿದ ತರುಣರು ಸೈನಿಕನ ಬಗ್ಗೆ ತಿಳಿದುಕೊಳ್ಳಲು ಅತ್ಯಂತ ಉತ್ಸುಕರಾಗಿದ್ದರು. ಹೋದ ತಕ್ಷಣ ನಮ್ಮ ಬಗ್ಗೆ ವಿಚಾರಿಸಿ ಅತ್ಯಂತ ಪ್ರೀತಿಯಿಂದ ಬರಮಾಡಿಕೊಂಡ ತಂದೆ ಮಹಾದೇವ ಅವರು ಯೋಧನ ಬಗ್ಗೆ ಮಾತಾಡಲಾರಂಭಿಸಿದರು. ಹೆಸರು ವಿನೋದ ನಾಯ್ಕ ಹುಟ್ಟಿದ್ದು ಕಾರವಾರದಲ್ಲಿ, ಹಿಂದೂ ಹೈಸ್ಕೂಲಿನಲ್ಲಿ ತನ್ನ ವಿದ್ಯಾಭ್ಯಾಸವನ್ನು ಮುಗಿಸಿದ ನಂತರ ಮುಂದೆ ತನ್ನ ತಂದೆಯ ಅಣತಿಯಂತೆ .ಟಿ.. (ಫಿಟ್ಟರ್) ಮುಗಿಸಿದ, ಆಗಲೇ ವಿನೋದನಿಗೆ ಸೈನ್ಯಕ್ಕೆ ಸೇರುವ ಕನಸು ಚಿಗುರೊಡೆದಿತ್ತು. ತನ್ನ ಮಿತರೆಲ್ಲರೊಡನೆ ಚರ್ಚಿಸಿ ಎಲ್ಲರು ಸೈನ್ಯಕ್ಕೆ ಸೇರುವುದೆಂದು ನಿರ್ಧರಿಸಿದರು ಸೇನಾ ಭಾರತಿಯ ರ್ಯಾಲಿಗಾಗಿ ಮಂಗಳೂರಿಗೆ ಹೊರಟು ನಿಂತರು. ಮೊದಲನೆಯ ಪ್ರಯತ್ನದಲ್ಲಿ ವಿಫಲನಾದ ವಿನೋದ, ಎರಡನೇ ಪ್ರಯತ್ನದಲ್ಲಿ ತನ್ನ ಮಿತೃರನ್ನೆಲ್ಲ ಹಿಂದಿಕ್ಕಿ ತಾನೂ ಅಂದುಕೊಂಡಿದನ್ನು ಸಾಧಿಸಿದ್ದ, ಅದೇ ಸಮಯಕ್ಕೆ ತನ್ನ ತಂದೆ ಕೆಲಸ ಮಾಡುತ್ತಿದ್ದ ಕಂಪನಿಯಲ್ಲಿ ಸಿಕ್ಕ ಕೆಲಸವನ್ನು ಧಿಕ್ಕರಿಸಿ ಸೇನೆಯ ತರಬೇತಿಗಾಗಿ ಬೆಂಗಳೂರಿನ ಸಿ.ಎಮ್.ಪಿ. ಸೆಂಟರ್ (ಕಾಪ್ರ್ಸ ಆಫ್ ಮಿಲಿಟರಿ ಪೊಲಿಸ್) ಹೊರಟು ನಿಂತ. ತಾಯಿ ಹೋಗುವುದೇ ಬೇಡವೆಂದು ಹಟ ಹಿಡಿದು ಕುಳಿತರು, ಇರುವ ಒಬ್ಬ ಮಗನನ್ನು ಗಡಿಯಲ್ಲಿ ಕಳುಹಿಸಿ ತಾವು ಇಲ್ಲಿ ಮಾಡುವುದಾದರು ಏನು ಎಂದರು. ಅದರೆ ತಂದೆ ಮಾತ್ರ ತಣ್ಣನೆಯ ಧ್ವನಿಯಲ್ಲಿ ನಿನ್ನ ಇಚ್ಛೆಗೆ ತಕ್ಕಂತೆ ನೀನು ಮಾಡು ಎಂದು ಹೇಳಿದ್ದರು. ಕೊನೆಗೂ ತಾಯಿ ಮನ ಒಲಿಸಿ ಬೆಂಗಳೂರಿಗೆ ಹೊರಟ ವಿನೋದ
ಮೊದಲಿನಿಂದಲೂ ದೇಶದ ಬಗ್ಗೆ ಅಪಾರವಾದ ಪ್ರೀತಿಯನ್ನು ಹೊಂದಿದ ವಿನೋದ ಇವತ್ತು ಅದೇ ಭಾರತ ಮಾತೆಯ ಸೇವೆಗೆ ಹೊರಟು ನಿಂತಿದ್ದ .  ಯಾವುದಕ್ಕೂ ಅಂಜದ  ವಿನೋದ ಅತ್ಯಂತ ಸಾಹಸಮಯೀ ಹಾಗೂ ಗುರಿ ಇಡುವುದರಲ್ಲಿ  ನಿಪುಣನಾಗಿದ್ದ. ಸೇನಾ ತರಬೇತಿಯಲ್ಲಿ ಗುರಿ ಇಡುವುದರಲ್ಲಿ ಪದಕಗಳನ್ನು ಗಳಿಸಿಕೊಂಡಿದ್ದ. ಆತ ಸೇನೆಯಲ್ಲಿ ಸೇವೆ ಸಲ್ಲಿಸಿದ ದಿನಗಳನ್ನು ಸರಿಯಾಗಿ ಲೆಕ್ಕ ಇಟ್ಟಿರುವ ಆತನ ತಂದೆ ಸರಿಯಾಗಿ ನಾಲ್ಕು ವರ್ಷ 48 ದಿನಗಳು ಅಂತ ನಿಖರವಾಗಿ ಹೇಳುತ್ತಾರೆ. ಒಟ್ಟು ದಿನಗಳಲ್ಲಿ ಅವನು ಮನೆಗೆ ಬಂದಿದ್ದು 4 ದಿನಗಳು ಮಾತ್ರ. ಒಮ್ಮೆ ಮನೆಯಲ್ಲಿರುವ ಕುಟುಂಬದವರು ಮತ್ತು ಬಂಧೂಗಳೆಲ್ಲರೂ ಸೇರುತ್ತಾರೆ ಆತನಿಗೂ ಬರುವಂತೆ ಕೇಳಿಕೊಂಡಾಗ, ಇಲ್ಲಿ ನಡೆಯುವ ಒಂದು ಕಾರ್ಯಕ್ರಮಕ್ಕೆ ರಾಷ್ಟ್ರಪತಿ .ಪಿ.ಜೆ ಅಬ್ದುಲ್ ಕಲಾಂ ಅವರು ಬರುತ್ತಿದ್ದಾರೆ ಅವರಿಗೆ ಗಾರ್ಡ ಆಫ್ ಹಾನರ್ ಹಾಗೂ ಅವರಿಗೆ ಕೈ ಮಿಲಾಯಿಸುವ ಅಪರೂಪದ ಕೆಲಸ ನನ್ನದು ಅದಕ್ಕೆ ಬರಲಾಗದು ಅಂತ ಹೆಮ್ಮೆಯಿಂದ ಹೇಳಿಕೊಂಡಿದ್ದನಾತ
ಕ್ಷಣ ತಂದೆ ತಾಯಿಗೂ ಹೆಮ್ಮೆಯನ್ನೇ ತಂದಿರುತ್ತದೆ ಬಿಡಿ
ಸೈನ್ಯದಲ್ಲಿ ಈತನಿಗೆ ಬಂದ ಒಂದಿಷ್ಟು ದುಡ್ಡಿನಿಂದ ತಾನೂ ಒಂದು ಬುಲೆಟ್ ಬೈಕ್ ಅನ್ನು ಕೊಂಡುಕೊಳ್ಳುವುದಾಗಿ ತಂದೆಗೆ ಹೇಳಿದಾಗ, ಬೇಡ ನೀನು ಮನೆಗೆ ಬರುವುದೆ ಅಪರೂಪ ನೀನು ಇಲ್ಲಿಲ್ಲದಿದ್ದಾಗ ಬೈಕ್ ಓಡಿಸುವವರು ಯಾರು ಇಲ್ಲಾ ಅದರ ಬದಲು ಮನೆ ಕಟ್ಟಿಸೊಣ ಮನೆ ಹಳೇಯದಾಗಿದೆ ಅಂದಾಗ ಅಪ್ಪನ ಮಾತಿಗೆ ಒಪ್ಪಿಕೊಂಡಿದ್ದ ಮಗ ಹೊಸ ಮನೆಯ ಗೃಹಪ್ರವೇಶಕ್ಕೆಂದು ಬಂದವ ಮತ್ತೆ ಹೊಸ ಮನೆಗೆ ಬಂದಿದ್ದು ಬಂದಿದ್ದು ತ್ರಿವರ್ಣ ಧ್ವಜ ಹೊದ್ದ ಪೆಟ್ಟಿಗೆಯಲ್ಲೇ!!
 ಹೌದು ಅಂದು, 18-08-2005 ಜಮ್ಮುವಿನ ಪೂಂಚ್ ಸೆಕ್ಟರ್ ನಲ್ಲಿ ರಾತ್ರಿ ಪಾಳಿಯಲ್ಲಿ ಬಂಕರ್ ನಲ್ಲಿ ಪೋಸಿಷನ್ ತೊಗೊಂಡು ನಿಂತ ವಿನೋದ ಇನ್ನೇನು  ಹದಿನೈದು ನಿಮಿಷ ಕಳೆದರೆ ತನ್ನ ಪಾಳಿಯ ಕೆಲಸ ಮುಗಿದು ಹೊಗುತ್ತಿತು ಅನಂತರ 80 ಕಿ.ಮಿ. ದೂರದ ಪೋಸ್ಟಿನಲ್ಲಿ ಕಾರವಾರದ ಇನ್ನೊಬ್ಬ ಯೋಧನಾದ ಉದಯಕಾಂತ ಬಳಿ ಹೋಗಿ, ತಂಗಿ ಕಳಿಸಿ ಕೊಟ್ಟ ರಾಖಿಯನ್ನು ಕಟ್ಟಿಸಿಕೊಂಡು ಬರುವ ಹಂಬಲ ದೊಂದಿದ್ದ. ಆದರೆ ಅದೇ ಸಮಯದಲ್ಲಿ ಆದ ಹಟಾತ್ ದಾಳಿಯಲ್ಲಿ ಗಡಿಯಾಚೆಯಿಂದ ಬಂದ ಗುಂಡು ನೇರ ವಿನೋಧರ ಹಣೆಗೆ ಹೊಕ್ಕಿ ಅವರ ಪ್ರಾಣ ತೆಗೆದೆ ಬಿಟ್ಟಿತ್ತು. ತಂಗಿ ಕಳಿಸಿಕೊಟ್ಟ ರಾಖಿಯನ್ನು ಅಣ್ಣನ ಕೈ ಸೇರದೆ ಅನಾಥವಾಗಿತ್ತು, ಅಣ್ಣ ಭಾರತದ ಗಡಿಯಲ್ಲಿ ಹಿಮದ ನೆಲದಲ್ಲಿ ತಾಯಿಯ ಮಡಿಲನ್ನು ಸೇರಿ ಹೋಗಿದ್ದ, ಆತನ ಹೆಸರು ಇತಿಹಾಸದ ಪುಟ ಸೇರಿಯಾಗಿತ್ತು. ಅಂದು ಸುದ್ದಿ ತಿಳಿದ ಕಾರವಾರದ ಜನತೆ ದಿಗ್ಬ್ರಾಂತರಾದರು. ಆತನ ಅಂತ್ಯ ಸಂಸ್ಕಾರಕ್ಕೆ ಸೇರಿದ ಅಪಾರ ಜನಸ್ತೋಮ ವೀರ ಯೊಧನ ಅಕಾಲ ಮರಣಕ್ಕೆ ಕಂಬನಿ ಮಿಡಿದಿತ್ತು. ಕಾರವಾರದ ಕಡವಾಡ ಆತನ ಸ್ವಗ್ರಾಮದಲ್ಲಿ ಸಕಲ ಸೇನೆ ಹಾಗೂ ಪೊಲಿಸ್ ಗೌರವದೊಂದಿಗೆ ಪಂಚಭೂತದಲ್ಲಿ ಲೀನನಾಗಿ ಹೋದ. ಇರುವ  ಒಬ್ಬೆ ಒಬ್ಬ ಮಗನನ್ನೂ ಸಹ ದೇಶಕ್ಕಾಗಿ ಸಮರ್ಪಿಸಿ ಸಂಪೂರ್ಣ ಜೀವನವನ್ನು ಆತನ ನೆನಪಿನಲ್ಲೆ ಕಳೆಯುತ್ತಿರುವ ಆತನ ತಂದೆ-ತಾಯಿಗಳಿಗೆ ಎಷ್ಟು ಧನ್ಯವಾದಗಳನ್ನು ಸಮರ್ಪಿಸಿದರು  ಅವರ ದುಖಃವನ್ನು ತುಂಬಿಕೊಡಲಾರದು.
ಇವುಗಳ ಮಧ್ಯ ಮನೆಗೆ ಮಗನಂತೆ ನಿಂತಿರುವುದು ಆತನ ಮಿತ್ರ ಉದಯಕಾಂತ. ವಿನೋದನ ಪರಿಚಯವಾಗಿದ್ದು ಸೇನಾ ಭಾರತಿಯ ರ್ಯಾಲಿಯಲ್ಲಿ ಇಬ್ಬರೂ ಅಕ್ಕಪಕ್ಕದ ಊರಿನವರು ಇಬ್ಬರೂ ಒಂದಿಷ್ಟು ದಿನ ಕಾಲ ಒಂದೇ ಗಡಿಯಲ್ಲಿ ಸೇವೆ ಸಲ್ಲಿಸಿದವರು. ವಿನೋದ ಜೊತೆಯ ಗೆಳೆತನದ ಕರ್ತವ್ಯವನ್ನು ಚಾಚುತಪ್ಪದೆ ಇಂದಿಗೂ ನಿಭಾಯಿಸುತ್ತಾ ಅವನ ಮನೆಯ ಸಂಪೂರ್ಣ ಜವಾಬ್ದಾರಿಯನ್ನು ಹಾಗೂ ಹೆಮ್ಮೆಯ ಯೋಧನಾಗಿ ಸೇವೆ ಸಲ್ಲಿಸುತ್ತಿರುವ  ಉದಯಕಾಂತ, ಇವರಿಗೆ ನಾವು ಎಷ್ಟು ಧನ್ಯವಾದ ಹೇಳಿದರೂ  ಕಡಿಮೆಯೇ ಅನ್ನಿಸುತ್ತೆ. ಇಂತಹ ಲೇಕ್ಕವಿಲ್ಲದಷ್ಟು ಅದೆಷ್ಟೋ ಸೈನಿಕರು  ಈ ದೇಶಕ್ಕಾಗಿ ನಮಗಾಗಿ ತಮ್ಮ ಪ್ರಾಣವನ್ನೇ  ಅರ್ಪಣೆ ಮಾಡಿದ್ದಾರೆ , ಈ ದೇಶದ ಗಡಿಯಲ್ಲಿ ಶತ್ರುಗಳ ಗುಂಡಿಗೆ ಎದೆಯೊಡ್ಡಿ ತಮ್ಮ ಪ್ರಾಣವನ್ನೇ ಒತ್ತೆಯಾಗಿ ಇಟ್ಟಿದ್ದಾರೆ , ಇಂತಹ ಸೈನಿಕರನ್ನು ಸ್ಮರಿಸುವದು ಅವರ ತ್ಯಾಗ ಬಲಿದಾನಗಳನ್ನು ನೆನಪಿಸಿ ಅವರ ಕುಟುಂಬದ ಜೊತೆ ನಾವಿದ್ದೇವೆ ಎನ್ನುವ ಭರವಸೆಯನ್ನು ನೀಡುವದು ನಮ್ಮ ನಿಮ್ಮೆಲ್ಲರ ಈ ಸಮಾಜದ ಕರ್ತವ್ಯವಾಗಿದೆ .
  ಯಾರೊಬ್ಬರ ಸಾವಿನಲಿ ಎಲ್ಲರ ನೆನಪಿಗುಳಿಯುವದು ಘನತೆ ಮಾತ್ರ  ಬದುಕೇನು ಬಂದಂತೆ ಕಳೆದು ಹೋಗುತ್ತದೆ. ಸೈನಿಕನ ಕಥೆ ಕೇಳಿ ಮೈ ಮರೆತು ಕುಂತ ಯುವ ಬ್ರೀಗೆಡ ತರುಣರು ತಂದಿಟ್ಟ ತಿನಿಸುಗಳನ್ನು ಸ್ವೀಕರಿಸಲು ಹಿಂದೇಟು ಹಾಕುವುದನ್ನು ಕಂಡ ವಿನೋಧರ ತಂದೆಯವರ ಒಂದು ಮಾತಿನಿಂದ ಒಂದು ಚೂರು ಕೂಡ ತಟ್ಟೆಯಲ್ಲಿ  ಬಿಡದೆ ತಿಂದುಬಿಟ್ಟರು. ಹೇಳಿದ್ದೇನು ಗೊತ್ತಾ, “ನೀವು ತಿನ್ನದೇ ಇದ್ದರೇ ನನಗೆ ಬೇಜಾರಾಗತ್ತೆ, ವಿನೋಧನನ್ನೇ ನಿಮ್ಮಲ್ಲಿ ಕಾಣುತ್ತಿದ್ದೇನೆ”. ಭಾರವಾದ ಮನಸ್ಸು ಮತ್ತು ಒದ್ದೆಯಾದ ಕಣ್ಣುಗಳೊಂದಿಗೆ ಮಾತಿಲ್ಲದೆ ಮನೆಗೆ ಹೆಜ್ಜೆ ಹಾಕಿತು ತರುಣರ ತಂಡ
ವಿನೋದನ ಜೊತೆಗೆ, ವಿನೋದನಂತಹ ಅದೆಷ್ಟು ಸೈನಿಕರನ್ನು ದೇಶಕ್ಕೆಂದು ಕಳುಹಿಸುತ್ತಿರುವ ತಂದೆ ತಾಯಿಗೂ ನಮ್ಮ ಸಲಾಂ ಸಲ್ಲದಿದ್ದರೆ ತಪ್ಪು ನಮ್ಮದಾಗುತ್ತೆ

ಜೈ ಹಿಂದ್
ಪವನ್ ಹೆಬ್ಬಾರೆ

Saturday, November 21, 2015

ಇಂತಹ ಪೋಲಿಸರನ್ನು ಮರೆಯುವದಾದರು ಹೇಗೆ...? ’

ಇಂತಹ ಪೋಲಿಸರನ್ನು ಮರೆಯುವದಾದರು ಹೇಗೆ...?

ಮೊಹಮ್ಮೆದ್ ಅಜ್ಮಲ್ ಆಮಿರ್ ಕಸಬ್’,
ಈ ಹೆಸರನ್ನು ಕೆಳಿರಬೇಕಲ್ಲ, ಹಾ ಕೆಳಿರ್ತಿರಿ ಯಾಕಿಲ್ಲ 26/11 ಮುಂಬೈ ನ ದಾಳಿಯಲ್ಲಿ ಜೀವಂತವಾಗಿ ಸೆರೆ ಸಿಕ್ಕ ಒಬ್ಬನೇ ಒಬ್ಬ ಉಗ್ರ ಈ ಅಜ್ಮಲ್ ಕಸಬ್ .
ತುಕಾರಾಂ ಓಂಬ್ಳೆ , ಈ ಹೆಸರನ್ನು ಕೇಳಿದಿರಾ ,, ಇಲ್ಲ ಸಾಧ್ಯವಿಲ್ಲ ಒಂದಿಷ್ಟು ಜನರಿಗೆ ಬಿಟ್ರೆ ಉಳಿದವರಿಗೆ ಈ ತುಕಾರಾಂ ಓಂಬ್ಳೆ ಯಾರು ಎಂಬುದೇ ಗೊತ್ತಿಲ್ಲ . ಅಜ್ಮಲ್ ಕಸಬ್ ಜೀವಂತಾಗಿ ಸಿಕ್ಕ ಎಂಬುದಷ್ಟೇ ನಮಗೆ ಗೊತ್ತು ಆದ್ರೆ ಕ್ಷಣ ಮಾತ್ರಕ್ಕೂ ಇಂತಹ ಉಗ್ರ ಅದೇಗೆ ಸೆರೆ ಸಿಕ್ಕ ಎಂಬುದರು ಕುರಿತು ನಾವು ಯಾವತ್ತಿಗೂ ಯೋಚಿಸಲಿಲ್ಲ , ಆದ್ರೆ ನಾವುಗಳು ಚಿಂತಿಸಿದ್ದು ಮಾತ್ರ ಯಾವಾಗ ಈತನನ್ನು ನೇಣಿಗೆ ಹಾಕುತ್ತಾರೆ ಎಂಬುದಷ್ಟೇ . ಇಂತ ಉಗ್ರ ಕಸಬ್ ನನ್ನು ಜೀವಂತವಾಗಿ ಸೆರೆ ಹಿಡಿಯುವಲ್ಲಿ ಅತಿ ಮುಖ್ಯ ಪ್ರಮುಖ ಪಾತ್ರವನ್ನು ವಹಿಸಿದವರೇ ಒಬ್ಬ ಸಾಮಾನ್ಯ ಪೋಲಿಸ್ ಪೇದೆ ( ASI) ''ತುಕಾರಾಂ ಓಂಬ್ಳೆ''.
2008 ರ, ನವೆಂಬರ್ 26 ರ ಮಧ್ಯರಾತ್ರಿಯಂದು
ಮೇಲಿನ ಅಧಿಕಾರಿಗಳಿಂದ ಆದೇಶ ಬಂದ ಪ್ರಕಾರ ತುಕಾರಾಂ ಅವರು, ಮೆರಿನ್ ಡ್ರೈವ್ನಲ್ಲಿ ನಿಗದಿಯಾದ ಸ್ಥಳದಲ್ಲಿ ತಮ್ಮ ಡ್ಯೂಟಿಗೆ ಹೋಗಿದ್ದರು . ಬುಧವಾರ ರಾತ್ರಿ, ಲಿಯೊಪೋಲ್ಡ್ ಕೆಫೆಯಲ್ಲಿ ಉಗ್ರರ ದಾಳಿಯ ಸುದ್ದಿ ಬಂದಾಗ, ಸುಮಾರು 12-45 ಆಗಿತ್ತು, ಆಗ ’ವಾಕಿ-ಟಾಕಿ’ಯಲ್ಲಿ ಅವರಿಗೆ ಹುಷಾರಾಗಿರಲು ಎಚ್ಚರಿಕೆ ನೀಡಿದ್ದಲ್ಲದೆ, ಇಬ್ಬರು ಆತಂಕಿಗಳು ಸ್ಕೋಡ ಕಾರುನ್ನು ಹೈಜಾಕ್ ಮಾಡಿ ಅದರಲ್ಲೇ ಅವರು ಮುಂದೆ ’ಗಿರ್ಗಾಂ ಚೌಪಾಟಿ'ಯ ಕಡೆ ಧಾವಿಸುತ್ತಿದ್ದಾರೆ ಎಂಬ ಸುದ್ದಿ ಬಂತು. ಅಷ್ಟರಲ್ಲೇ ಅವರ ಮುಂದೆ, ಒಂದು 'ಸ್ಕೋಡಾ ಕಾರ್,' ' ರುಯ್ಯನೆ' ಹಾದು ಹೋಯಿತು. ತಕ್ಷಣ, ತುಕಾರಾಂರವರು ತಮ್ಮ ಮೊಟರ್ ಸೈಕಲ್ ಮೇಲೇ ಹಾರಿ, ಕಾರ್ ನ್ನು ' ಬೆನ್ನತ್ತಿಕೊಂಡು ಹೋದರು. ’ಡೀಬಿ ಮಾರ್ಗ್ ಪೋಲೀಸ್ ಸ್ಟೇಷನ್’ ನಲ್ಲಿ ಆತಂಕಿಗಳ ಕಾರನ್ನು ತಡೆಯಲು, ದೊಡ್ಡ ತಡೆ ಒಡ್ಡುವ ಏರ್ಪಾಡು ನಡೆಯುತ್ತಿತ್ತು. ’ಚೌಪಾಟಿ ಸಿಗ್ನಲ್’ ಬಳಿ ಕಾರು ಬಂದಾಗ, ಪೋಲೀಸರ ಮೇಲೆ, ಉಗ್ರರು ಗುಂಡಿನ ಮಳೆಗರೆದರು. ಆದರೆ ಅಲ್ಲಿ ವೇಗದ ತಡೆಯಿದ್ದದ್ದು (ಸ್ಪೀಡ್ ಬ್ರೇಕರ್ಸ್) ಸಹಾಯಕ್ಕೆ ಬಂತು. ಓಂಬ್ಳೆ ತಮ್ಮ ಬೈಕನ್ನು ವೇಗವಾಗಿ ಓಡಿಸಿಕೊಂಡು ಹೋಗಿ, ಸ್ಕೋಡಾ ಕಾರಿನ ಮುಂದೆ ನಿಲ್ಲಿಸಿ, ಕಾರನ್ನು ಬಲಗಡೆ ನಿಲ್ಲಿಸಲು ಚಾಲಕನಿಗೆ ಆದೇಶಿಸಿದರು. ಇದು ಆತಂಕಿಗಳಿಗೆ ಸ್ವಲ್ಪ ಕಸಿವಿಸಿಯಾಯಿತು. ಕಸಬ್ನ ಧ್ಯಾನವೆಲ್ಲಾ ಓಂಬ್ಳೆಯವರ ಮೇಲೆ ಕೇಂದ್ರೀಕೃತವಾಗಿತ್ತು. ಹಾಗಾಗಿ, ಬೇರೆಯವರ ಮೇಲೆ ಹಲ್ಲೆ ಮಾಡಲು ಸಾಧ್ಯವಾಗಲಿಲ್ಲ. ಇಷ್ಟರಲ್ಲಿ ಬೇರೆ ಪೋಲೀಸ್ ಪೇದೆಗಳು, ಇನ್ನೊಬ್ಬ ’ಕಟ್ಟರ್ ಉಗ್ರ ಇಸ್ಮೇಲ್’ ನನ್ನೂ ಗುಂಡಿಟ್ಟು ಕೊಂದರು. ಕಸಬ್ ನನ್ನು ಹಿಡಿಯಲು ಪೊಲೀಸರು ಬರುತ್ತಿರುವುದನ್ನು ಕಂಡು, ಕಸಬ್, ದಾಳಿಮಾಡಲು ಪ್ರಾರಂಭಿಸಿದ". ಅಂಜದೆ ಮುಂದೆ ನುಗ್ಗಿದ ತುಕಾರಾಂ ಓಂಬ್ಳೆ ಯವರು ಉಗ್ರ ಕಸಬ್ ನನ್ನು ಗಟ್ಟಿಯಾಗಿ ಹಿಡಿದುಕೊಂಡರು ಆದ್ರೆ ಆತನ AK47 ಇಂದ ಹೊರಬಿದ್ದ ಗುಂಡುಗಳು ತುಕರಾಂ ಅವರ ಹೊಟ್ಟೆಯೊಳಗೆ ಹೊಕ್ಕಿದ್ದವು ಕೆಳಕ್ಕೆ ಬಿಳುವಾಗಲು ಗಟ್ಟಿಯಾಗಿ ಕಸಬ್ ನನ್ನು ಹಿಡಿದುಕೊಂಡೆ ಬಿದ್ದರು ಅಷ್ಟರಲ್ಲಿ ಬಂದಂತ ಉಳಿದ ಪೊಲೀಸರು ಕಸಬ್ನನ್ನು ಬಂದಿಸಿದ್ದರು . 
ಕಸಬ್ ಏನೋ ಸೆರೆ ಸಿಕ್ಕ ಆದ್ರೆ ತುಕಾರಾಂ ಓಂಬ್ಳೆ ಮಾತ್ರ ಶಹೀದ್ ಆಗಿದ್ದರು , ಒಬ್ಬ ಸಾಮಾನ್ಯ ಪೋಲಿಸ ಉಗ್ರನನ್ನು ಸೆರೆಹಿಡಿಯುವಲ್ಲಿ ಯಶ್ವಸಿಯಾಗಿ ಬಾರದ ಲೋಕಕ್ಕೆ ಮರಳಿದ್ದರು , ಇವತ್ತು ತುಕಾರಾಂ ಓಂಬ್ಳೆ ಯವರನ್ನ ಈ ದೇಶ ಅದೆಷ್ಟು ಬೇಗ ಮರೆತು ಬಿಟ್ಟಿತು ,ಆದ್ರೆ ಏನಂತೆ ಯುವ ಬ್ರಿಗೇಡ್ ಈ ಬಾರಿ ರಾಜ್ಯಾದಂತ 26/11 ಕ್ಕೆ ಇವರ ಬಲಿದಾನವನ್ನ ನೆನಪಿಸುವ ಕೆಲಸವನ್ನು ಮಾಡುತ್ತಿದೆ ,ಇಂತ ಪೋಲಿಸರನ್ನು ನಾವು ಗಡಿಯೋಳಗಿನ ಸೈನಿಕರೆಂದೇ ತಿಳಿದುಕೊಂಡಿದ್ದೇವೆ ಇದರ ಜೊತೆಗೆ ಇಂತಹ ಇನ್ನು ಅನೇಕ ಕರ್ತ್ಯವ್ಯ ನಿರತ ಗಡಿಯೋಳಗಿನ ಸೈನಿಕರಿಗೆ ಪ್ರೀತಿಯಿಂದ ಧನ್ಯವಾದಗಳನ್ನು ಹೇಳಿ ಹಾರೈಸಿಸಲು ಹೊರಟಿದ್ದೇವೆ ,
ಒಂದೊಳ್ಳೆಯ ಕೆಲಸಕ್ಕೆ ನೀವು ನಮ್ಮೊಂದಿಗೆ ಕೈ ಜೋಡಿಸಿ .

Monday, July 6, 2015

ಭದ್ರಗಿರಿಯ ಹಳಿಂಗಳಿ ಮತ್ತು ನೆನಪಿನ ಇನ್ನೊಂದು ಮೈಲಿಗಲ್ಲು


    4ನೇ ತಾರಿಖು ಶನಿವಾರ ಸಂಜೆ ಹುತಾತ್ಮ ಭರತೆಶನಿಗೆ ಶ್ರದ್ದಾಂಜಲಿ ಸಭೆ , 5 ನೇ ತಾರಿಖು ಹಳಿಂಗಳಿಯಲ್ಲಿ 25000 ಸಸಿಗಳನ್ನು ನೆಡುವ ಸಾಹಸದ  ಕಾರ್ಯಕ್ರಮ , ಹೊರಡುವದೋ  ಬೇಡವು ಎಂಬ ಗೊಂದಲದಲ್ಲೆ ಹೊರಟದ್ದಾಯಿತು , ಶನಿವಾರ ಬೆಳಗ್ಗೆ ಹೊರಟು  ಅಥಣಿ ತಲಪುವದಕ್ಕೆ ಸಂಜೆ 5:30 ದೀರ್ಘ ಪ್ರಯಾಣ ಸ್ವಲ್ಪ ಆಯಾಸ , ಭರತೇಶನ ಶ್ರದ್ದಾಂಜಲಿ ಸಭೆಯಲ್ಲಿ ನೆರೆದಿದ್ದ ಅಪಾರ ಜನಸ್ತೋಮದ ಮನಗಳು ಭಾರವಾಗಿದ್ದವು , ಅಲ್ಲಿಂದ ರಾತ್ರಿ ಊಟ ಮುಗ್ಗಿಸಿ ಭದ್ರಗಿರಿಗೆ ತಳಪುವದರೊಳಗೆ ಸಮಯ ಅದಾಗಲೇ 11 . ಇನ್ನೇನು ಮಲಗಬೇಕು ಎನ್ನುವದರೊಳಗೆ ,ಕಿರಣ್ ಅಣ್ಣ - ಪವನ್ ನೀ ನಡಿ ನನ್ನ ಜೊತೆ ಅಂದ್ರು , ಆದೇಶ ಪಾಲಿಸುವದೊಂದೇ ನನ್ನ ಕೆಲಸ  ಹೂ ಎಂದು ಹೊರಟೆಹಳಿಂಗಳಿಯ ದೊಡ್ಡ ಬೆಟ್ಟಕ್ಕೆ ಹೊರಟು ಬೆಳಗಿನ ಎಲ್ಲ ತಯಾರಿ ನಡೆಸಿ , ತೋಡಿದ ಗುಂಡಿಯೇನ್ನಲ್ಲ ಒಮ್ಮೆ ನೋಡಿ ರಾತ್ರಿ ಮರಳಿ ಬರುವದೊರಳಗೆ ಸಮಯ ಘಂಟೆಯಾಗಿತ್ತು . ಅದ್ಯಾರದು ಮನೆ ಗೊತ್ತಿಲ್ಲ ಮನೆಯ ತಾರಿಸಿಯ ಮೇಲೆ ನೀರಾಶ್ರಿತರ ಶಿಬಿರದಲ್ಲಿರುವ ತರಾ ಸಾಲಾಗಿ ಎಲ್ಲರು ಮಲಗಿದ್ದರು , ಅಲ್ಲಿಯೇ ಯಾರದೋ ಚಾದರನ್ನು ಎಳೆದು ಸಿಕ್ಕ ಜಾಗದಲ್ಲಿ ಮಲಗಿದೆ  , ಬೆಳಗ್ಗೆ ಚಕ್ರವರ್ತಿ ಅಣ್ಣನ ಧ್ವನಿಯನ್ನು ಕೇಳಿದಂತಾಗಿ ಮುಸುಕು ಕಣ್ಣಿನಲ್ಲಿ ನೋಡಿದರೆ ಬದಿಗೆ ವಿನಯ್ ಅಣ್ಣ ಮತ್ತೊಂದು ಬದಿಗೆ ಚಕ್ರವರ್ತಿ ಅಣ್ಣ , ಇಷ್ಟೆಲ್ಲಾ ಹೇಳಲು ಕಾರಣ ಯುವ ಬ್ರಿಗೆಡ್ ಸರಳತೆ ಮತ್ತು ನನ್ನ ನಿದ್ದೆ ಸರಿಯಾಗಿಲ್ಲ ಎಂದು.

  ಇನ್ನು ಭಧ್ರಗಿರಿಯ ಬೆಟ್ಟ , ನಾವೆಲ್ಲಾ ಉತ್ತರ ಕರ್ನಾಟಕದ ಕಡೆಗಿನ ಬೆಟ್ಟಗಳನ್ನು ನೋಡಿದ್ದಿವಿ ಬೋಳು ಬೆಟ್ಟಗಳು ದೊಡ್ಡ ಕಲ್ಲುಗಳು ಬಿಟ್ಟರೆ ಜಾಲಿ ಮುಳ್ಳುಗಳು , ಇಂತಹ ಬೆಟ್ಟದಲ್ಲಿ ನಾವು ಇವತ್ತು ಸಸಿಗಳನ್ನು ನೆಡಬೇಕು ,ಅದಕ್ಕಾಗಿ ಸುಮಾರು ೨೯೦೦೦ ಸಾವಿರ ಸಸಿಗಳು ಮತ್ತು - ಸಾವಿರ ಯುವಶಕ್ತಿಯಿಂದ ಹಿಡಿದು ೯೦ ಅಜ್ಜಿಯವರೆಗೆ ಎಲ್ಲರು ಸಿದ್ದ , ಬೆಳಗ್ಗೆ ಚಕ್ರವರ್ತಿ ಅಣ್ಣನ ಮಾತುಗಳಿಂದ ಪ್ರೇರಣೆ ಪಡೆದು ನಮ್ಮ ಯುವ ಬ್ರಿಗೇಡಿಯರ್ ಗಳು ತಮ್ಮ ತಮ್ಮ ಬೆಟಾಲಿಯನ್ (ಗುಂಪಿನೊಂದಿಗೆ) ಮೊದಲೇ ನಿರ್ಧರಿಸಿದಂತೆ ಬೆಟ್ಟದ ಮೂಲೇ ಮೂಲೆಯ ಕಡೆಗೂ ಹೊರಟರು .

ಸಸಿನೆಡುವ ಕಾರ್ಯ - ನಮ್ಮ ಗುಂಪಿನಲ್ಲಿ ನಾವುಂದು ೫೦ ಜನ ಸಸಿಯನ್ನು ನೆಡಬೇಕು ಅಷ್ಟೊಂದು ಸುಲಭದ ಕೆಲಸವಲ್ಲ ಇಳಿಜಾರಿನ ಬೆಟ್ಟ ನಡೆದಾಡಲು ಜಾಗವಿಲ್ಲ ಮಧ್ಯ ಮಧ್ಯ ಕಲ್ಲುಗಳು , ನಮ್ಮ ಸ್ವಾಗತಕ್ಕೆ ಕಾದು ಕುಳಿತ ಜಾಲಿ ಮುಳ್ಳುಗಳು , ಮೊದಲು ಮೇಲಿಂದ ಎಲ್ಲ ಸಸಿಗಳುನ್ನು ಕೆಳಗಡೆ ಸಾಗಿಸಬೇಕು ಸುಮಾರು ಒಂದು ಸಾವಿರ ಸಸಿಗಳು ಅಲ್ಲಿಂದ ಗುಂಡಿ ತೊಡಿದಂತಹ ಜಾಗಕ್ಕೆ ಸಾಗಿಸಬೇಕು , ಮಧ್ಯ ಯಾರೋ ಎಲ್ಲಿಂದಲೋ ಭಾರತ್ ಮಾತಾ ಕೀ ಎನ್ನುವದು ಎಲ್ಲರು ಒಟ್ಟಿಗೆ ಜೈ ಅನ್ನುವದು ಇದರ ಜೊತೆಗೆ ಬುಲೆಟ್ ನಲ್ಲಿ ಪೂರ್ತಿ ಬೆಟ್ಟವನ್ನು ತಿರುಗುತ್ತ ಸ್ಪೂರ್ತಿಯನ್ನು ತುಂಬುವ ನಮ್ಮ ಬ್ರಿಗೇಡಿಯರ್ ಚಕ್ರವರ್ತಿ , ಕೆಲಸಕ್ಕೆ ಸ್ಫೂರ್ತಿ ಮತ್ತು ಕೆಲಸದ ವೇಗ ಹೆಚ್ಚುತ್ತಿತ್ತು , ಈಗ ಸೂರ್ಯ ಸ್ವಲ್ಪ ಮೇಲೆ ಬಂದಾಗಿತ್ತು ಗುಂಪಿನಲ್ಲಿರುವರ ಸಂಖ್ಯೆಯು ಕಡಿಮೆ ಯಾಗಿತ್ತು ಇನ್ನು ಉತ್ತರ ಕರ್ನಾಟಕದ ಬಿಸಿಲಿನ ಬಗ್ಗೆ ಬೇರೆ ಹೇಳಬೇಕ ..?




ಮೊದಲನೇ ಹಂತದ ಕೆಲಸವಾಗಿತ್ತು ಸಸಿಗಳನ್ನ ಭೂಮಿಯೊಳಗೆ ಹಾಕಿಯಾಗಿತ್ತು ಅದಕ್ಕಿಗ ನೀರು ಹಾಕುವ ಕೇಲಸ ಅತ್ಯಂತ ಕಟಿಣವಾದದ್ದು , ಇವಗಳೆಲ್ಲ ನಡುವೆ ನನಗೆ ಸ್ಪೂರ್ತಿಯಾದದ್ದು ತಾಯಿಯೊಬ್ಬರು ಬೆಟ್ಟದ ಭಾಗದಿಂದ ಪೂರ್ತಿಯಾಗಿ ತಿರುಗಿ ಸಸಿ ನೆಟ್ಟು ತೆಗೆದ ಪ್ಲಾಸ್ಟಿಕ್ ಚಿಲಗಳನ್ನು ಒಟ್ಟು ಮಾಡುತ್ತಿದ್ದದ್ದು ಮತ್ತು ಸ್ವತಹ ತಾವೇ ಸಸಿಗಗನ್ನು ಹೊತ್ತು ಹೋಗಿ ನೆಡುತ್ತಿದ್ದರು ಅತ್ಯಂತ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದರು . ನನಗೆ ಸುಸ್ತಾಯಿತು ಆನಿಸಿದಾಗ ಒಮ್ಮೆ ತಾಯಿಯತ್ತ ನೋಡಿ ಮತ್ತೆ ಸ್ಪೂರ್ತಿಯಿಂದ ನನ್ನ ಕೆಲ್ಸಕ್ಕೆ ನಾನು ಅಣಿಯಾಗುತ್ತಿದ್ದೆ , ಇಂತಹ ತಾಯಂದಿರ  ಹಲವಾರು ಕಥೆಗಳನ್ನು ನನ್ನ ಮಿತ್ರರು ಕೊನೆಯಲ್ಲಿ ನನಗೆ ಹೇಳಿದರು . ಸುಮಾರು ೧೨೦೦ ಸಸಿಗಳನ್ನು ನೆಟ್ಟಾಗಿತ್ತು  ಈಗ ಅದಕ್ಕೆ ನೀರು ಹಾಕಬೇಕು , ಕುಡಿಯಲು ನೀರಿಲ್ಲ ನೀರನ್ನು ಕುಡಿಯಬೇಕಾದರು ಬೆಟ್ಟದ ತುದಿಗೆ ಹೋಗಬೇಕು . ತುಂಬಾ ಇಳಿಜಾರು ಮತ್ತು ಕಲ್ಲುಗಳಿರುವದರಿಂದ ನೀರಿನ ಟ್ಯಾಂಕರ್ ಅರ್ಧ ಕಿಲೋಮಿಟರ ದೂರದಲ್ಲಿಯೆ ನಿಂತಿತ್ತು . ಇದರ ಜೊತೆಗೆ ವಾಟ್ಸ್ ಪ್  ನಲ್ಲಿ ಪದೇ ಪದೇ ಬರುವ ಮೆಸೆಜುಗಳ ತರ ಜಾಲಿ ಮುಳ್ಳುಗಳು ಪ್ರತಿಯೊಬ್ಬರಿಗೂ ಕಾಡಿದ್ದು ಸುಳ್ಳಲ್ಲ , ನಮ್ಮ ಗಂಟಲುಗಳು ಆರಿಹೊಗಿವೆ ಸಸಿಗಳು ನೀರಿಲ್ಲದೆ ಭೂಮಿಯ ಒಡಲಲ್ಲಿ ನಿಂತಿವೆ , ಯಾರೋ ಒಂದು ಕೊಡ ನೀರನ್ನು ಮೆಲಿನಿಂದ ಹೊತ್ತು ತಂದರು  ಅದರಲ್ಲಿ ಎಲ್ಲರು ಸ್ವಲ್ಪ ನೀರನ್ನು ಕುಡಿದು ಜೊತೆಗೆ ಸುಮುಖ್ ಅಣ್ಣನ ಮಾತುಗಳಿಂದ ಪ್ರೇರಣೆ ಪಡೆದು  ಅರ್ಧ ಕಿಲೋಮಿಟರ ದೂರದವರೆಗೂ ಟ್ಯಾಂಕರ್ ನಿಂದ ಹೀಡಿದು ನಮ್ಮ  ಭಾಗದ ತುದಿಯ ವರೆಗೂ ಸಾಲಾಗಿ  ನಿಂತು , ನೀರು ತುಂಬಿದ ಕೊಡಗಳು ಕೈಯಿಂದ ಕೈ ಗೆ ಸಾಗಿ ಕೊನೆಯಲ್ಲಿ ಸಸಿಗಳನ್ನು ತಂಪಾಗಿಸುತ್ತಿದ್ದವು ಇವಗಳ ನಡುವೆ ಭಾರತ ಮಾತಾ ಕೀ ಜೈ , ವಂದೇ ಮಾತರಂ ಘೋಷಣೆಗಲಿಂದ ಕೆಲಸದ ವೇಗ ಹೆಚ್ಚುತ್ತಿತ್ತು , ಅದೇ ಸಮಯಕ್ಕೆ ಸರಿಯಾಗಿ ಸೂರ್ಯನಿಗೆ ಮೋಡ ಮರೆಯಾಗಿ ತಂಪು ಗಾಳಿ ಬಿಸಲು ಶುರುವಾಯಿತು . ಇತ್ತ ನಾವು ನೀರನ್ನು ಹಾಕುತ್ತಿದ್ದರೆ ನಮ್ಮ ಭಾಗದ ಬದಿಗೆ ಇನ್ನೊಂದಿಷ್ಟು ಜನ ಸಸಿ ಗಳನ್ನೂ ನೆಡಲು ಶುರು ಮಾಡಿದ್ದರು ಸುಮಾರು ೧೫೦೦ ಸಸಿಗಳನ್ನು ನೆಟ್ಟು ನೀರುಣಿಸಿಯಾಗಿತ್ತು , ಯುದ್ದವನ್ನೇ ಗೆದ್ದವೆಂಬ ಸಂಬ್ರಮ ಜೀವನದಲ್ಲಿ ಒಂದು ಅನುಭವ ಮತ್ತು ನೆನಪಿನ ಮತ್ತೊಂದು ಮೈಲಿಗಲ್ಲುಅದಾಗಲೇ ಹೊಟ್ಟೆ ಚುರುಗುಡುತ್ತಿತ್ತು , ಹಾ ಇಷ್ಟೆಲ್ಲಾ ನಡೆದಿದ್ದು ಬೆಟ್ಟದ ಒಂದು ಭಾಗದಲ್ಲಿ ಮಾತ್ರ , ಆದರೆ  ಇಂತಹ ಸಹಸಮಯವಾದ ಕೆಲಸ ಹಳಿಂಗಳಿ ಬೆಟ್ಟದ ಪೂರ್ತಿ  ಪ್ರತಿ ಭಾಗದಲ್ಲೂ ನಡೆದಿದೆ , ಇದುವೇ ನನ್ನ ಹೆಮ್ಮೆಯ ಯುವಾ ಬ್ರಿಗೆಡ್ . ಎಲ್ಲಿ ಮಳೆಯಗುತ್ತೋ ಬಿಡತ್ತೋ , ಆದ್ರೆ  ಹಳಿಂಗಳಿಯಲ್ಲಿ ಮಳೆ ಆಯ್ತಾ ..? ಅಂತ ಪ್ರತಿಯೊಬ್ಬ ಯುವಾ ಬ್ರಿಗೇಡಿಯರ್ ಕೇಳದೆ ಇರಲಾರ

ಮರಳಿ ಮನೆಗೆ ಬಂದ ಮೇಲೆ ಗೊತ್ತಾಯಿತು ಅವತ್ತು ರಾತ್ರಿ ಅಲ್ಲಿ ಮಳೆಯಾಯಿತು ಅಂತ , ಮುನಿಶ್ವರ ಸ್ವಾಮಿಗಳು 4 ದಿನಗಳಿಂದ ಮಳೆ ಬರುವದಕ್ಕಾಗಿ ನೀರನ್ನು ಸಹ ಕುಡಿಯದೆ   ಮಾಡುತ್ತಿದ ಉಪವಾಸದ ಹಠಯೋಗ ಫಲಕೊಟ್ಟಿತ್ತು.


ಪವನ್ ಹೆಬ್ಬಾರೆ