Total Pageviews

Saturday, November 21, 2015

ಇಂತಹ ಪೋಲಿಸರನ್ನು ಮರೆಯುವದಾದರು ಹೇಗೆ...? ’

ಇಂತಹ ಪೋಲಿಸರನ್ನು ಮರೆಯುವದಾದರು ಹೇಗೆ...?

ಮೊಹಮ್ಮೆದ್ ಅಜ್ಮಲ್ ಆಮಿರ್ ಕಸಬ್’,
ಈ ಹೆಸರನ್ನು ಕೆಳಿರಬೇಕಲ್ಲ, ಹಾ ಕೆಳಿರ್ತಿರಿ ಯಾಕಿಲ್ಲ 26/11 ಮುಂಬೈ ನ ದಾಳಿಯಲ್ಲಿ ಜೀವಂತವಾಗಿ ಸೆರೆ ಸಿಕ್ಕ ಒಬ್ಬನೇ ಒಬ್ಬ ಉಗ್ರ ಈ ಅಜ್ಮಲ್ ಕಸಬ್ .
ತುಕಾರಾಂ ಓಂಬ್ಳೆ , ಈ ಹೆಸರನ್ನು ಕೇಳಿದಿರಾ ,, ಇಲ್ಲ ಸಾಧ್ಯವಿಲ್ಲ ಒಂದಿಷ್ಟು ಜನರಿಗೆ ಬಿಟ್ರೆ ಉಳಿದವರಿಗೆ ಈ ತುಕಾರಾಂ ಓಂಬ್ಳೆ ಯಾರು ಎಂಬುದೇ ಗೊತ್ತಿಲ್ಲ . ಅಜ್ಮಲ್ ಕಸಬ್ ಜೀವಂತಾಗಿ ಸಿಕ್ಕ ಎಂಬುದಷ್ಟೇ ನಮಗೆ ಗೊತ್ತು ಆದ್ರೆ ಕ್ಷಣ ಮಾತ್ರಕ್ಕೂ ಇಂತಹ ಉಗ್ರ ಅದೇಗೆ ಸೆರೆ ಸಿಕ್ಕ ಎಂಬುದರು ಕುರಿತು ನಾವು ಯಾವತ್ತಿಗೂ ಯೋಚಿಸಲಿಲ್ಲ , ಆದ್ರೆ ನಾವುಗಳು ಚಿಂತಿಸಿದ್ದು ಮಾತ್ರ ಯಾವಾಗ ಈತನನ್ನು ನೇಣಿಗೆ ಹಾಕುತ್ತಾರೆ ಎಂಬುದಷ್ಟೇ . ಇಂತ ಉಗ್ರ ಕಸಬ್ ನನ್ನು ಜೀವಂತವಾಗಿ ಸೆರೆ ಹಿಡಿಯುವಲ್ಲಿ ಅತಿ ಮುಖ್ಯ ಪ್ರಮುಖ ಪಾತ್ರವನ್ನು ವಹಿಸಿದವರೇ ಒಬ್ಬ ಸಾಮಾನ್ಯ ಪೋಲಿಸ್ ಪೇದೆ ( ASI) ''ತುಕಾರಾಂ ಓಂಬ್ಳೆ''.
2008 ರ, ನವೆಂಬರ್ 26 ರ ಮಧ್ಯರಾತ್ರಿಯಂದು
ಮೇಲಿನ ಅಧಿಕಾರಿಗಳಿಂದ ಆದೇಶ ಬಂದ ಪ್ರಕಾರ ತುಕಾರಾಂ ಅವರು, ಮೆರಿನ್ ಡ್ರೈವ್ನಲ್ಲಿ ನಿಗದಿಯಾದ ಸ್ಥಳದಲ್ಲಿ ತಮ್ಮ ಡ್ಯೂಟಿಗೆ ಹೋಗಿದ್ದರು . ಬುಧವಾರ ರಾತ್ರಿ, ಲಿಯೊಪೋಲ್ಡ್ ಕೆಫೆಯಲ್ಲಿ ಉಗ್ರರ ದಾಳಿಯ ಸುದ್ದಿ ಬಂದಾಗ, ಸುಮಾರು 12-45 ಆಗಿತ್ತು, ಆಗ ’ವಾಕಿ-ಟಾಕಿ’ಯಲ್ಲಿ ಅವರಿಗೆ ಹುಷಾರಾಗಿರಲು ಎಚ್ಚರಿಕೆ ನೀಡಿದ್ದಲ್ಲದೆ, ಇಬ್ಬರು ಆತಂಕಿಗಳು ಸ್ಕೋಡ ಕಾರುನ್ನು ಹೈಜಾಕ್ ಮಾಡಿ ಅದರಲ್ಲೇ ಅವರು ಮುಂದೆ ’ಗಿರ್ಗಾಂ ಚೌಪಾಟಿ'ಯ ಕಡೆ ಧಾವಿಸುತ್ತಿದ್ದಾರೆ ಎಂಬ ಸುದ್ದಿ ಬಂತು. ಅಷ್ಟರಲ್ಲೇ ಅವರ ಮುಂದೆ, ಒಂದು 'ಸ್ಕೋಡಾ ಕಾರ್,' ' ರುಯ್ಯನೆ' ಹಾದು ಹೋಯಿತು. ತಕ್ಷಣ, ತುಕಾರಾಂರವರು ತಮ್ಮ ಮೊಟರ್ ಸೈಕಲ್ ಮೇಲೇ ಹಾರಿ, ಕಾರ್ ನ್ನು ' ಬೆನ್ನತ್ತಿಕೊಂಡು ಹೋದರು. ’ಡೀಬಿ ಮಾರ್ಗ್ ಪೋಲೀಸ್ ಸ್ಟೇಷನ್’ ನಲ್ಲಿ ಆತಂಕಿಗಳ ಕಾರನ್ನು ತಡೆಯಲು, ದೊಡ್ಡ ತಡೆ ಒಡ್ಡುವ ಏರ್ಪಾಡು ನಡೆಯುತ್ತಿತ್ತು. ’ಚೌಪಾಟಿ ಸಿಗ್ನಲ್’ ಬಳಿ ಕಾರು ಬಂದಾಗ, ಪೋಲೀಸರ ಮೇಲೆ, ಉಗ್ರರು ಗುಂಡಿನ ಮಳೆಗರೆದರು. ಆದರೆ ಅಲ್ಲಿ ವೇಗದ ತಡೆಯಿದ್ದದ್ದು (ಸ್ಪೀಡ್ ಬ್ರೇಕರ್ಸ್) ಸಹಾಯಕ್ಕೆ ಬಂತು. ಓಂಬ್ಳೆ ತಮ್ಮ ಬೈಕನ್ನು ವೇಗವಾಗಿ ಓಡಿಸಿಕೊಂಡು ಹೋಗಿ, ಸ್ಕೋಡಾ ಕಾರಿನ ಮುಂದೆ ನಿಲ್ಲಿಸಿ, ಕಾರನ್ನು ಬಲಗಡೆ ನಿಲ್ಲಿಸಲು ಚಾಲಕನಿಗೆ ಆದೇಶಿಸಿದರು. ಇದು ಆತಂಕಿಗಳಿಗೆ ಸ್ವಲ್ಪ ಕಸಿವಿಸಿಯಾಯಿತು. ಕಸಬ್ನ ಧ್ಯಾನವೆಲ್ಲಾ ಓಂಬ್ಳೆಯವರ ಮೇಲೆ ಕೇಂದ್ರೀಕೃತವಾಗಿತ್ತು. ಹಾಗಾಗಿ, ಬೇರೆಯವರ ಮೇಲೆ ಹಲ್ಲೆ ಮಾಡಲು ಸಾಧ್ಯವಾಗಲಿಲ್ಲ. ಇಷ್ಟರಲ್ಲಿ ಬೇರೆ ಪೋಲೀಸ್ ಪೇದೆಗಳು, ಇನ್ನೊಬ್ಬ ’ಕಟ್ಟರ್ ಉಗ್ರ ಇಸ್ಮೇಲ್’ ನನ್ನೂ ಗುಂಡಿಟ್ಟು ಕೊಂದರು. ಕಸಬ್ ನನ್ನು ಹಿಡಿಯಲು ಪೊಲೀಸರು ಬರುತ್ತಿರುವುದನ್ನು ಕಂಡು, ಕಸಬ್, ದಾಳಿಮಾಡಲು ಪ್ರಾರಂಭಿಸಿದ". ಅಂಜದೆ ಮುಂದೆ ನುಗ್ಗಿದ ತುಕಾರಾಂ ಓಂಬ್ಳೆ ಯವರು ಉಗ್ರ ಕಸಬ್ ನನ್ನು ಗಟ್ಟಿಯಾಗಿ ಹಿಡಿದುಕೊಂಡರು ಆದ್ರೆ ಆತನ AK47 ಇಂದ ಹೊರಬಿದ್ದ ಗುಂಡುಗಳು ತುಕರಾಂ ಅವರ ಹೊಟ್ಟೆಯೊಳಗೆ ಹೊಕ್ಕಿದ್ದವು ಕೆಳಕ್ಕೆ ಬಿಳುವಾಗಲು ಗಟ್ಟಿಯಾಗಿ ಕಸಬ್ ನನ್ನು ಹಿಡಿದುಕೊಂಡೆ ಬಿದ್ದರು ಅಷ್ಟರಲ್ಲಿ ಬಂದಂತ ಉಳಿದ ಪೊಲೀಸರು ಕಸಬ್ನನ್ನು ಬಂದಿಸಿದ್ದರು . 
ಕಸಬ್ ಏನೋ ಸೆರೆ ಸಿಕ್ಕ ಆದ್ರೆ ತುಕಾರಾಂ ಓಂಬ್ಳೆ ಮಾತ್ರ ಶಹೀದ್ ಆಗಿದ್ದರು , ಒಬ್ಬ ಸಾಮಾನ್ಯ ಪೋಲಿಸ ಉಗ್ರನನ್ನು ಸೆರೆಹಿಡಿಯುವಲ್ಲಿ ಯಶ್ವಸಿಯಾಗಿ ಬಾರದ ಲೋಕಕ್ಕೆ ಮರಳಿದ್ದರು , ಇವತ್ತು ತುಕಾರಾಂ ಓಂಬ್ಳೆ ಯವರನ್ನ ಈ ದೇಶ ಅದೆಷ್ಟು ಬೇಗ ಮರೆತು ಬಿಟ್ಟಿತು ,ಆದ್ರೆ ಏನಂತೆ ಯುವ ಬ್ರಿಗೇಡ್ ಈ ಬಾರಿ ರಾಜ್ಯಾದಂತ 26/11 ಕ್ಕೆ ಇವರ ಬಲಿದಾನವನ್ನ ನೆನಪಿಸುವ ಕೆಲಸವನ್ನು ಮಾಡುತ್ತಿದೆ ,ಇಂತ ಪೋಲಿಸರನ್ನು ನಾವು ಗಡಿಯೋಳಗಿನ ಸೈನಿಕರೆಂದೇ ತಿಳಿದುಕೊಂಡಿದ್ದೇವೆ ಇದರ ಜೊತೆಗೆ ಇಂತಹ ಇನ್ನು ಅನೇಕ ಕರ್ತ್ಯವ್ಯ ನಿರತ ಗಡಿಯೋಳಗಿನ ಸೈನಿಕರಿಗೆ ಪ್ರೀತಿಯಿಂದ ಧನ್ಯವಾದಗಳನ್ನು ಹೇಳಿ ಹಾರೈಸಿಸಲು ಹೊರಟಿದ್ದೇವೆ ,
ಒಂದೊಳ್ಳೆಯ ಕೆಲಸಕ್ಕೆ ನೀವು ನಮ್ಮೊಂದಿಗೆ ಕೈ ಜೋಡಿಸಿ .

No comments:

Post a Comment