Total Pageviews

Sunday, November 4, 2018

ಗೋವೆಯಲ್ಲಿ ರಥಯಾತ್ರೆ - Chicago_125

ಪ್ರತಿ ಬಾರಿ ಇಂತದ್ದೊಂದು ಕಾರ್ಯಕ್ರಮ ನಡೆದಾಗ.  ಮತ್ತೆ ಮತ್ತೆ ನೆನಪಾಗೋದು , ಕಳೆದ 4 ವರ್ಷಗಳ ಹಿಂದೆ ಚಕ್ರವರ್ತಿ ಅಣ್ಣನ ಜೊತೆ ದೂರವಾಣಿಯಲ್ಲಿ ಮಾತನಾಡಿದ ಮೊದಲ ಸಂಭಾಷಣೆ , ಚಕ್ರವರ್ತಿ ಅಣ್ಣನ ಭಾಷಣಗಳ ಮೂಲಕ ವಿವೇಕಾನಂದರ ಪ್ರಭಾವಕ್ಕೆ ಒಳಗಾದ ನಾನು ,ಮೊದಲ ಬಾರಿ ಮಾತನಾಡುವಾಗ ಅಣ್ಣಾ ನಾನು ನಿಮ್ಮ ಜೊತೆ ಕೆಲಸ ಮಾಡಬೇಕು ಆದ್ರೆ ನಾನು ಇರೋದು ಗೋವಾನಲ್ಲಿ ಆಗತ್ತ ಅಂತ ಕೇಳಿದ್ದೆ. ಅದಕ್ಕೆ ಅಣ್ಣಾ ಕೊಟ್ಟ ಉತ್ತರ ಎಲ್ಲಿದ್ದರೆ ಏನಪ್ಪಾ ಎಲ್ಲರೂ ಒಟ್ಟಾಗೋಣ ಒಟ್ಟಾಗಿ ಕೆಲಸ ಮಾಡೋಣ ಎಂದ ಮಾತು, ಒಟ್ಟಾಗಿ ಸೇರಿಸಿ ನನ್ನ ಇಷ್ಟೂ ದೂರ ತಮ್ಮ ಜೊತೆ ಸೇರಿಸಿ ಕರೆದೊಯ್ಯುತ್ತಾರೆ ಎಂದು ಎಂದಿಗೂ ಅಂದುಕೊಂಡಿರಲಿಲ್ಲ. ರಥಯಾತ್ರೆ ಶುರುವಾಗಿ ಒಂದು ತಿಂಗಳಾಗಿರಬಹುದು ಅಣ್ಣಾ ಕರೆ ಮಾಡಿ ನಿನಗೊಂದು ಚಾಲೆಂಜ್ ಕೊಡ್ತೀನಿ ಗೋವೆಯಲ್ಲಿ ರಥಯಾತ್ರೆ ಮಾಡಬೇಕು.
ಇಲ್ಲಿಂದಲೇ ನೋಡಿ ಚಿಂತೆ ಶುರುವಾಗಿದ್ದು ನಾನ್ ಒಬ್ಬನೇ ಅದ್ ಹೇಗ್ ಮಾಡೋಕೆ ಸಾಧ್ಯ..? ಆಗತ್ತ..? ಹೇಗ್ ಮಾಡೋದು..? ಹೀಗೆ ಹತ್ತಾರು ಪ್ರಶ್ನೆಗಳು ನನ್ನಲ್ಲಿಯೇ ಓಡಾಡತೊಡಗಿದ್ದವು. ಅದೊಂದು ರೂಢಿಯಾಗಿಬಿಟ್ಟಿದೆ ನೋಡಿ ಅದ್ಯಾವ ಕಷ್ಟಗಳಿಗೂ ಸಿಲುಕಿದರು ಎಲ್ಲವನ್ನು ಗುರುಮಹಾರಾಜರಿಗೆ ಅರ್ಪಿಸಿ ತಣ್ಣಗಾಗಿ ಬಿಡುವುದು. ಅಂತೆಯೇ ಎಲ್ಲವನ್ನು ಅರ್ಪಿಸಿ ಕುಳಿತುಬಿಟ್ಟೆ. ಎಲ್ಲ ದಾರಿಯು ಸಹ ಗುರುಮಹಾರಾಜರೆ ತೋರುವರು ಎಂಬ ನನ್ನ ಭರವಸೆ ಮತ್ತೊಮ್ಮೆ ಸುಳ್ಳಾಗಲಿಲ್ಲ. ಮೊದಲ ಬಾರಿ ಗೋವೆಯ ಒಟ್ಟು ಕನ್ನಡ ಸಂಘಟನೆಗಳು (35) ಯಾವದಾದರು ಒಂದು ಕಾರ್ಯಕ್ರಮಕ್ಕೆ ಒಂದಾಗಿದ್ದರೆ ಅದು ವಿವೇಕ ರಥಯಾತ್ರೆ. ಇನ್ನೂ ಕನ್ನಡ ಸಂಘಟನೆಗಳ ಜೊತೆ ಸ್ಥಳೀಯ ಸಂಘಟನೆಗಳು ಒಂದಾಗಿ ಮಾಡಿದ ಕಾರ್ಯಕ್ರಮವೆಂದರೆ ಅದು ವಿವೇಕ ರಥಯಾತ್ರೆ. ಎಲ್ಲ ಕನ್ನಡ ಸಂಘಟನೆಗಳು ಒಟ್ಟಾಗಿ ಉತ್ತರ ಗೋವೆ ಮತ್ತು ದಕ್ಷಿಣ ಗೋವೆಯ ಜವಾಬ್ದಾರಿಯನ್ನ ಹಂಚಿಕೊಂಡರೆ , ಪಣಜಿಯ ಕಾರ್ಯಕ್ರಮದ ಜವಾಬ್ದಾರಿಯನ್ನ ವಿವೇಕ ಜಾಗ್ರತ ಬಳಗ ಹಾಗೂ ಪರಂಪರೆ ಪ್ರತಿಷ್ಠಾನ ವಹಿಸಿಕೊಂಡಿತ್ತು. ಇನ್ನೂ  ಕಾರ್ಯಕ್ರಮದ ರೂಪುರೇಷೆ ಹೇಗೆ ರಥಯಾತ್ರೆ ಶುರುವಾಗಬೇಕಿತ್ತು ಎನ್ನುವದರ ಕುರಿತು ತಯಾರಿಯಾಗಬೇಕಿತ್ತು , ವಿವೇಕಾನಂದರು ಹೆಜ್ಜೆ ಇಟ್ಟ ಹಾದಿಯನ್ನು ಹುಡುಕಾಡಬೇಕಿತ್ತು . ಇವೆಲ್ಲ ಕಾರ್ಯಕ್ಕೆ ಒಟ್ಟಾದವರು ನಮ್ಮ Ramdas Haldipur ಮತ್ತು Manju YB ರಥಯಾತ್ರೆ ಇನ್ನೊಂದು ವಾರವಿದೆ ಎನ್ನುವಾಗ ಶುರುವಾದ ನಮ್ಮ ತಯಾರಿ ಹೇಗೆ ಬೆಳಗಾಗುತ್ತಿತ್ತೋ ಹೇಗೆ ರಾತ್ರಿಯಾಗುತ್ತಿತ್ತೋ ಎಂಬುದರ ಅರಿವೇ ಆಗುತ್ತಿರಲಿಲ್ಲ. ನಿರಂತರ ಸುತ್ತಾಟ ನಡಿದೆ ಇತ್ತು. ಅಂತೂ ಎಲ್ಲ ಪ್ರಯತ್ನಗಳ ನಂತರ ಒಂದು ಅಂತಿಮ ರೂಪರೇಷೆ ನಡೆದು ರಥ ಗೋವೆಗೆ ಬರುವ ದಿನ ಆಕ್ಟೊಬರ್ 29 ಬಂದೆ ಬಿಟ್ಟಿತ್ತು.

ಅಕ್ಟೋಬರ್ 29ರ ಬೆಳಗ್ಗೆ ಬಾಗಲಕೋಟೆಯ ಮೂಲಕ ಹೊರಟ ರಥ ಬೆಳಗಾವಿ ಮಾರ್ಗವಾಗಿ ಮಧ್ಯಾಹ್ನ 3 ಘಂಟೆಯ ಹೊತ್ತಿಗೆ ಗೋವೆಯೊಳಗೆ ಬಂದು ತಲುಪಿತ್ತು. ಮೊದಲೇ ಗೋವೆಯಲ್ಲಿನ ಚಿಕ್ಕ ಚಿಕ್ಕ ರಸ್ತೆಗಳು ಎಲ್ಲಿ ರಥ ಯಾವ ದಾರಿಯಲ್ಲಿ ನಿಂತುಬಿಡತ್ತೋ ಎಂಬ ಚಿಕ್ಕ ಭಯ ಇದ್ದೆ ಇತ್ತು. ಇನ್ನೇನೂ ಬಿಚೋಲಿ ತಲುಪಬೇಕು ಎನ್ನುವದರಲ್ಲಿ ಬ್ರಿಡ್ಜ್ ಒಂದು ಅಡ್ಡಗಟ್ಟಿಯೇ ಬಿಟ್ಟಿತ್ತು. ಸಂಜೆ ತುಂಬು  ದಟ್ಟ ಸಂಚರಣೆಯ ಸಮಯ ರಸ್ತೆಗಳೆಲ್ಲ  ಹಾದಿಕಟ್ಟಿ ಗಾಡಿಗಳು ನಿಂತುಬಿಟ್ಟಿದ್ದವು ಅವನ್ನೆಲ್ಲ ಸಂಭಾಳಿಸಿ ರಥವನ್ನ ತಿರುಗುಸಿ ಇನ್ನೊಂದು ರಸ್ತೆಯ ಮೂಲಕ ಸಾಗಿವಸುವಲ್ಲಿ ಸಂಜೆ ಸಮಯ ಏಳು ಘಂಟೆ . ಇದೆಲ್ಲವೂ ಸಾಧ್ಯವಾಗಿದ್ದು ನಮ್ಮ ಸಾರಥಿಯಿಂದ.
 ಮೂವತ್ತನೆ ತಾರೀಖು ಸಂಜೆ ನಾಲ್ಕು ಘಂಟೆಗೆ ಶುರುವಾದ ಮೊದಲ ಕಾರ್ಯಕ್ರಮ ಬಿಚೋಲಿಯ ಪಟ್ಟಣದೆಲ್ಲ ಬೈಕ್ ರ್ಯಾಲಿಯ ಮೂಲಕ ಶೋಭಾಯಾತ್ರೆ ಮುಗಿಸಿ ಪಟ್ಟಣದ ಮಧ್ಯಭಾಗದಲ್ಲಿರುವ ಶಾಂತಾದುರ್ಗಾ ಶಾಲೆಯ ಆವರಣದಲ್ಲಿ ಸಭಾಕಾರ್ಯಕ್ರಮಕ್ಕೆ ಬಂದು ತಲುಪಿತು. ಚಕ್ರವರ್ತಿ ಅಣ್ಣನ ಮಾತುಗಳನ್ನ ಕನ್ನಡದಲ್ಲಿ ಕೇಳುವದು ಸಹಜ ಆದರೆ ಹಿಂದಿಯಲ್ಲಿ ಕೇಳಲು ಅದೇನೋ ಹೊಸ ಹುರುಪು ಮನೆಮಾಡಿತ್ತು. ಅತ್ಯಂತ  ಅಚ್ಚುಕಟ್ಟಾಗಿ ಕಾರ್ಯಕ್ರಮ ಹಾಗೂ ಎಲ್ಲ ವ್ಯವಸ್ಥೆಗಳ ನಂತರ ರಥ ರಾತ್ರಿ ಪೊಂಡಾದ ರಾಮಕೃಷ್ಣ ಆಶ್ರಮಕ್ಕೆ ಬಂದು ತಲುಪಿತು.

ಮೂವತ್ತೊಂದನೆ ತಾರೀಖು ಬೆಳಗ್ಗೆ 8 ಘಂಟೆಗೆ ಮಂತ್ರೋಚ್ಚಾರಣೆಯ ಹಾಗೂ ಮಠದ ಗುರುಗಳ ಪೂಜೆಯ ನಂತರ ಪೊಂಡಾದ ವಿಠ್ಠಲ ಮಂದಿರದಿಂದ ಸರಸ್ವತಿ ಮಂದಿರದವರೆಗೆ ವಾದ್ಯಗಳೊಂದಿಗೆ ,ಸ್ಥಳೀಯರ ಸಹಕಾರದಲ್ಲಿ ಶೋಭಾಯಾತ್ರೆ ಸಾಗಿತು , ವಿಠ್ಠಲ ಮಂದಿರ ತಲಪುವ ಮೊದಲೇ ಮಡಗಾಂವ್ ನ ಸಂಘಟಕರು ರಥದ ಸ್ವಾಗತಕ್ಕೆ ಕಾದೂ ಕುಳಿತಿದ್ದರು  . ಸರಸ್ವತಿ ಮಂದಿರದಲ್ಲಿ ಪೂಜೆಯನ್ನು ನಡೆಸಿ ರಥ ಪೊಂಡಾದಿಂದ ಮಡಗಾಂವನ ಮೊದಲೇ ನಿಗದಿ ಪಡಿಸಿದ ಆಯೋಜನೆಯಂತೆ ರಥ ಚಿನ್ಮಯಿ ಮಿಷನ್ ಗೆ ತಲುಪಿತು. ಅಲ್ಲಿ ರಥವನ್ನ ಅತ್ಯಂತ ಪ್ರೀತಿಯಿಂದ ಬರಮಾಡಿಕೊಂಡ ಅಲ್ಲಿನ ಸ್ವಾಮಿಜಿ ಶ್ರೀ ನಿಖಿಲಾನಂದ ಮಹಾರಾಜರು ತಾವೇ ಮುಂದೆ ನಿಂತು ರಥದ ಪೂಜೆಯನ್ನ ನೆರವೇರಿಸಿದರು . ನಂತರ ಅಲ್ಲಿನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಕ್ರವರ್ತಿ ಅಣ್ಣಾ ಮತ್ತೊಮ್ಮೆ ಹಿಂದಿಯಲ್ಲಿ ತಮ್ಮ ಭಾಷಣವನ್ನ ನೀಡುತ್ತಾ ಗೋವೆಯಲ್ಲಿ ಸ್ವಾಮೀಜಿಯ ಹೆಜ್ಜೆಗಳನ್ನ ಅತ್ಯಂತ ಸುಂದರವಾಗಿ ವಿವರಿಸಿದರು . ಕೊನೆಯಲ್ಲಿ ರಥದ ನಿರ್ವಾಹಕರು ಮತ್ತು ಬ್ರಿಗೇಡಿನ ಕಾರ್ಯಕರ್ತರು ಶ್ರೀ ನಿಖಿಲಾನಂದ ಮಹಾರಾಜರ ಆಶೀರ್ವಾದನ್ನ ಪಡೆದು ,ರಥ ಮಡಗಾಂವನ ಪಟ್ಟಣದಲ್ಲಿ ರ್ಯಾಲಿಯ ಮೂಲಕ ಸ್ವಾಮಿ ವಿವೇಕಾನಂದರೂ ಉಳಿದುಕೊಂಡ ದಾಮೋದರ್ ಸಾಲ್ ನಲ್ಲಿ ತಲುಪಿತ್ತು . ಅಲ್ಲಿನ ದೇವಸ್ಥಾದ ಮತ್ತು ಆ ಮನೆಯ ಪರಿವಾರದರೆಲ್ಲ ಒಟ್ಟಾಗಿ ರಥವನ್ನ ಸ್ವಾಗತಿಸಿದರಲ್ಲದೆ ಸ್ವಾಮೀಜಿ ಇದ್ದ ಕೋಣೆಯನ್ನ ಅವರು ಬಳಸಿದ ವಸ್ತುಗಳನ್ನ ಅತಿ ಪ್ರೀತಿಯಿಂದ ತೋರಿಸಿದರು. ಅಲ್ಲಿಂದ ಹೊರಟ ರಥಯಾತ್ರೆ ಪಟ್ಟಣದ ರಾಘವೇಂದ್ರ ಮಠಕ್ಕೆ ತಲುಪಿದಾಗ ರಥಕ್ಕೆ ಅರತಿಯನ್ನ ಬೆಳಗುವದರ ಮೂಲಕ ಪೂಜೆ ಮಾಡಿ ರಥವನ್ನ ಸ್ವಾಗತಿಸಿದರು. ಅಲ್ಲಿಂದ ಸಂಜೆ ವಾಸ್ಕೊದ ಜುವಾರಿನಗರಕ್ಕೆ ರಥ ತಲುಪಿತು, ಇಲ್ಲಿ ಸಿಕ್ಕಂತ ಭವ್ಯವಾದ ಸ್ವಾಗತ ಅದ್ಭುತವಾಗಿತ್ತು ,ಡೊಳ್ಳು , ಸ್ಕೌಟ್ಸ್ ಹುಡುಗರು , ವಾದ್ಯ ಹಾಗೂ ಕುಂಬದ ಮೂಲಕ ಅದ್ದೂರಿಯಾದ ಸ್ವಾಗತದ ಮೂಲಕ ರಥ ಕಾರ್ಯಕ್ರಮ ನಡೆಯುವ ಜಾಗಕ್ಕೆ ತಲುಪಿತೂ .ಅಲ್ಲಿ ಚಕ್ರವರ್ತಿ ಅಣ್ಣನ ಭಾಷಣವನ್ನ ಅತಿ ಉತ್ಸುಕತೆಯಿಂದ ಕೇಳಿದ ಜನ ಅಂತೂ ಎರಡನೇ ದಿನದ ರಥಯಾತ್ರೆ ಈ ಕಾರ್ಯಕ್ರಮದ ಮೂಲ ಮುಕ್ತಾಯವಾಗಿತ್ತು. ಅಲ್ಲಿಂದ ರಥ ಪಣಜಿಯ ಹೆಗಡೆವಾರು ಶಾಲೆಗೆ ತಲುಪಿತು

ನವೆಂಬರ್ ಒಂದನೇ ತಾರೀಖು ಬೆಳಗ್ಗೆ ಹೆಗಡೆವಾರು ಶಾಲೆಯಲ್ಲಿ ಪುಟ್ಟ ಮಕ್ಕಳ ಆವರಣದಲ್ಲಿ ವೀಕ್ಷಣೆಯಾದ ನಂತರ ಪಣಜಿಯ ಕಲಾ ಅಕಾಡೆಮಿಯಲ್ಲಿ ರಥ ಸ್ಥಾಪಿತವಾಯಿತು. ಅಲ್ಲಿಂದ ಸಂಜೆ ಅತ್ಯಂತ ಅಚ್ಚುಕಟ್ಟಾಗಿ ಸುಂದರವಾಗಿ ಆರತಿ ಹಾಗೂ ಪೂಜೆಯ ಮೂಲಕ ಗೋವೆಯ ಪರಂಪರೆ ದಿಂಡಿಯೊಂದಿಗೆ ಶೋಭಾಯಾತ್ರೆ ಆರಂಭವಾಯಿತು . ಸಮುದ್ರಕ್ಕೆ ತೀರ ಹತ್ತಿರವಿದ್ದ ಜಾಗ ಅಲೆಗಳ ಸದ್ದು ಒಂದೆಡೆಯಾದರೆ ಸಮುದ್ರದಲ್ಲಿ ಮರೆಯಾಗುತ್ತಿರುವ ಸೂರ್ಯ ಇನ್ನೊಂದೆಡೆಗೆ ಬಾನೆಲ್ಲ ಕೇಸರಿಮಯವಾಗಿ ರಥಯಾತ್ರೆ ರಂಗೇರಿತ್ತು. ಹಾಗೂ ಇದು ರಥ ಯಾತ್ರೆಯ ಕೊನೆಯ ಕಾರ್ಯಕ್ರಮ , ಪಣಜಿಯ ಮುಖ್ಯ ರಸ್ತೆಯುದ್ದಕ್ಕೂ ಸಾಗಿ ಮಹಾಲಕ್ಶ್ಮಿ ದೇವಸ್ಥಾನದ ಆವರಣದಲ್ಲಿ ಮುಕ್ತಾಯವಾಗಿತ್ತು ರಥದ ಕೊನೆಯ ಕಾರ್ಯಕ್ರಮದಲ್ಲಿ  ಮನೋಹರ್ ಮಾತನಾಡಿ ರಥದ ಬಗ್ಗೆ ಹಾಗೂ ನಿವೇದಿತಾಳ ಬಗ್ಗೆ ಮಾತನಾಡಿದರು . ರಥ ತನ್ನ ಚಿತ್ತಾರದಿಂದ ಅಲ್ಲಿದ್ದ ವಿದೇಶಿ ಪ್ರವಾಸಿಗರನ್ನು ಆಕರ್ಷಿಸುತ್ತ ರಥದ ಹತ್ತಿರ ಬಂದು ರಥದ ವಿವರಣೆ ಪಡೆಯುತ್ತಿದ್ದರು ಅಂತೂ ಒಂದು ವೈಭವದ ಶೋಭಾಯಾತ್ರೆಯಿಂದ ಗೋವೆಯಲ್ಲಿ ರಥಯಾತ್ರೆ ಮುಕ್ತಾಯವಾಗಿತ್ತು .

ಇಲ್ಲಿನ ಎಲ್ಲ ಸಂಘಟನೆಗಳನ್ನ ಒಟ್ಟುಗೂಡಿಸುವಲ್ಲಿ , ಶ್ರೀಮತಿ ಜಯಶ್ರೀ ಹೊಸಮನಿ ಹಾಗೂ ಶ್ರೀ ಸ್ಮಿತಾ ಬಗಲಿ ಯವರ ಪಾತ್ರ ದೊಡ್ಡದ್ದು.ಇನ್ನು ತನ್ನದೇ ಊರೆಂಬತೆ ಕಾರ್ಯಕ್ರಮದೂದ್ದಕ್ಕೂ ಜವಾಬ್ದಾರಿ ಹೊತ್ತು ಕೆಲಸ ಮಾಡಿದ Ravish Bhat , ಭಾರತೀಪುತ್ರ ಗೋಪಾಲ ಹಾಗೂ Shrinidhi Chippalkatti ನನ್ನ ಜೊತೆ ಹಠ ಹಿಡಿದು ನಾನು ಕಾರ್ಯಕ್ರಮಕ್ಕಲ್ಲ ಕೆಲಸಕ್ಕೆ ಬರ್ತಿನಿ ಎಂದು ಎಂದು ಮೂರು ದಿನಗಳ ಕಾಲ ಇಲ್ಲಿಯೇ ಇದ್ದು ಸಂಪೂರ್ಣ ಕಾರ್ಯಕ್ರಮವನ್ನ ಅಚ್ಚುಕಟ್ಟಾಗಿ ನಡೆಯುಸುವಲ್ಲಿ ಇವರ ಶ್ರಮ ತುಂಬಾ ದೊಡ್ಡದ್ದು . ಇಂತಹ ನಿಸ್ವಾರ್ಥ ಕಾರ್ಯಕರ್ತರ ಶ್ರಮವೇ ಯುವಾ ಬ್ರಿಗೇಡಿನ ಮೆಟ್ಟಿಲುಗಳು. ಈ ಕಾರ್ಯಕ್ರಮದ ತಯಾರಿಯಲ್ಲಿ ನಡೆದ ತಮಾಷೆಗಳು , ಹಾಸ್ಯದ ಚಟಾಕೆಗಳು , ಒಬ್ಬರಿಗೊಬ್ಬರು ಗೊತ್ತಿಲ್ಲದೆ ತೆಗೆದಿಟ್ಟುಕೊಂಡ ಫೋಟೋಗಳು ಇವೆಲ್ಲ ಅನುಭವಿಸದವನೆ ಬಲ್ಲ. ಅಂತೂ ಗೋವೆಯಲ್ಲಿ ನಡೆದ ರಥಯಾತ್ರೆ  ಕೊನೆಯವರೆಗೂ ಮರೆಯಲಾಗದ ಅವಿಸ್ಮರಣೀಯ ನೆನಪು.

No comments:

Post a Comment