ಈಗೊಂದು ಮುರ್ನಾಲ್ಕು ವರ್ಷಗಳ ಹಿಂದಿನ ಮಾತು , ಆಗಿನ್ನೂ ಯುವಾ ಬ್ರಿಗೇಡ್ ಹುಟ್ಟಿರಿಲಿಲ್ಲ. ಚಕ್ರವರ್ತಿ ಅಣ್ಣನ ಮಾತುಗಳಿಂದ ಪ್ರೇರಿತರಾಗಿ ಕಾರ್ಗಿಲ್ ವಿಜಯೋತ್ಸವವನ್ನ ಆಚರಿಸಬೇಕೆಂದು ನಿರ್ಧರಸಿ , ಹೇಗೆ ಏನೂ ಎತ್ತ ಯಾವದನ್ನೂ ಸಹ ತಿಳಿಯದೆ ಒಂದಿಷ್ಟು ಪೂರ್ವ ತಯಾರಿಯಲ್ಲಿ ಇದ್ದಾಗಲೇ ಸಿಕ್ಕಿದ್ದು ನಮ್ ಕಿರಣ್ ಅಣ್ಣಾ. ಅಲ್ಲಿಂದ ಆದ ಅವರ ಪರಿಚಯ ಇಂದಿಗೂ ಸಾಗುತ್ತ ಬಂದಿದೆ. ಅಲ್ಲಿಂದ ಹಿಡಿದು ಇಲ್ಲಿಯ ವರೆಗೂ ಪ್ರತಿ ಹೆಜ್ಜೆಯಲ್ಲೂ ಸಹ ಮಾರ್ಗದರ್ಶನ ನೀಡುತ್ತಾ ಕೈಹಿಡಿದು ನಡೆಸಿಕೊಂಡು ಬಂದಿದ್ದಾರೆ. ಹೃದಯದಲ್ಲಿ ಒಂದಿಷ್ಟು ರಾಷ್ಟ್ರ ಪ್ರೇಮ , ಸಮಾಜಕ್ಕಾಗಿ ಏನಾದರೂ ಮಾಡುವ ಹಪ ಹಪಿ ಹೊತ್ತು ತಿರುಗಾಡುತ್ತಿರುವಾಗಲೆ ಸರಿಯಾದ ಮಾರ್ಗದರ್ಶನ ಕೊಟ್ಟು ನನ್ನ ಸಾಗಿಸಿದ ಕೀರ್ತಿ ನಮ್ ಮಾಸ್ತರದ್ದು..ಮಾಸ್ತರ್ ಸರಿಯಾದ ಸಮಯಕ್ಕೆ ಸಿಗದೆ ಇದ್ದಿದ್ದರೆ ಬಹುಶ ಇಂದಿಗೆ ನಾನು ಅದೆಲ್ಲಿ ಇರುತ್ತಿದ್ದೇನೋ ಭಗವಂತನೇ ಬಲ್ಲ.. ನನ್ನ ಬದಕು ಬದಲಾದದ್ದೇ ಚಕ್ರವರ್ತಿ ಅಣ್ಣನ ಜೊತೆ ಮಾಡಿದ ಮೊದಲನೇ ಕನ್ಯಾಕುಮಾರಿಯ ಪ್ರವಾಸ, ಆಗಲೂ ಸಹ ನನ್ನ ತಯಾರು ಮಾಡಿ ಮನೇಲಿ ಖುದ್ದು ಮಾತನಾಡಿ ನನ್ನನ್ನು ಕಳಿಸಿ ಕೊಟ್ಟರು. ನೀವು ಬರಲ್ಲವ ಎಂದಾಗ ಇಲ್ಲದ ಕಾರಣ ನೆಪ ಹೇಳಿ ತಾವು ಅಲ್ಲೇ ಉಳಿದು ಬಿಟ್ಟರು. ಕನ್ಯಾಕುಮಾರಿ ಪ್ರವಾಸದಿಂದ ಮರಳುತ್ತಲೇ ಬದುಕಿನ ಹಾದಿಯು ಬದಲಾಗಿತ್ತು. ಅಲ್ಲಿಂದಾದ ನಿತ್ಯಣ್ಣನ ಪರಿಚಯ ಕೆಲಸದ ವೇಗ ಮತ್ತು ಜವಾಬ್ದಾರಿಯನ್ನು ಸಹ ಹೆಚ್ಚಿಸಿತ್ತು. ಮೊದಲಿನಿಂದಲೂ ತುಂಬಾ ಜನ ಕೇಳ್ತಾರೆ ನೀನು ಅಷ್ಟೂ ದೂರ ಇದ್ದರು ಸಹ ಅದ್ ಹೇಗೆ ಎಲ್ಲವನ್ನು ನಿಭಾಯಿಸಿಕೊಂಡು ಹೋಗ್ತೀಯಾ ಅಂತ ಇದೆಲ್ಲ ನಮ್ ಮಾಸ್ಟರ್ ಕಲಿಸಿದ ಪಾಠ , ಸಿಕ್ಕ ಹೊಸತರಲ್ಲೇ ನನ್ನ ರಾಜ್ಯ ಮಟ್ಟದ ಕೆಲಸಗಳಲ್ಲಿ ಜವಾಬ್ದಾರಿಯನ್ನು ಹೊದಿಸಿ ತಪ್ಪಿದಾಗ ತಿದ್ದಿ ತೀಡಿ ಸದಾ ಪ್ರೋತ್ಸಾಹಿಸುತ್ತ ಬೆನ್ನಹಿಂದೆ ನಿಂತರು. ಅವರು ಕೆಲ್ಸ ಮಾಡುವ ಶೈಲಿ ,ಯೋಚನೆ ಎಲ್ಲವೂ ವಿಭಿನ್ನವೇ.ಹೇಳುವದಿನ್ನು ತುಂಬಾ ಇದೆ ಆದ್ರೆ ಸಾಕು ನಿಮ್ಮ ಮಾತು ನೆನಪಾಗತ್ತೇ ಮತ್ತೆ. " ಒದಕಿ ಹೆಂಗ್ ಬೀಳ್ತಾವ್ " ಮುಂದೆಯೂ ಸಹ ಹೀಗೆ ನಗುತ್ತ ಆರೋಗ್ಯವಾಗಿ ಇರಿ ಮಾಸ್ತರ್. ಮತ್ತೊಮ್ಮೆ ಹುಟ್ಟು ಹಬ್ಬದ ಶುಭಾಶಯಗಳು. ಇಂದಿನ ತಮಾಷೆಗಳಿಗೆ ಎಲ್ಲ ಕ್ಷಮೆ ಇರಲಿ ಮಾಸ್ತರ್
No comments:
Post a Comment